ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನತ್ತ : ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಮೇಲುಗೈ
ನವದೆಹಲಿ: ಜಮ್ಮು ಕಾಶ್ಮೀರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾ ವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಸತತ ಮೂರನೇ ಬಾರಿ ಗೆಲುವಿನತ್ತ ನಾಗಾಲೋಟ ಮುಂದುವರಿಸಿದೆ.
90 ಸದಸ್ಯರ ಬಲಹೊಂದಿರುವ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ 47ರಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ಸಾಗತೊಡಗಿದೆ. ಕಾಂಗ್ರೆಸ್ 37, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ವಿಶೇಷವೇನೆಂದರೆ ಈ ಹಿಂದೆ ಬಿಜೆಪಿಯ ಮಿತ್ರ ಪಕ್ಷವಾಗಿದ್ದು, ಬಳಿಕ ಮೈತ್ರಿ ತೊರೆದ ಜೆಜೆಪಿ ( ಜನನಾಯಕ್ ಜನತಾ ಪಕ್ಷ) ಕನಿಷ್ಠ ಒಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿಲ್ಲ. ಆಮ್ ಆದ್ಮಿ ಪಾರ್ಟಿ ಸ್ಥಿತಿ ಕೂಡಾ ಇದೇ ಆಗಿದೆ. ಇತರರು ಆರು ಕ್ಷೇತ್ರಗಳಲ್ಲಿ ಮುನ್ನಡೆಯ ಲ್ಲಿದ್ದಾರೆ. ಈ ಚುನಾವಣೆಯಲ್ಲಿ ಜೆಜೆಪಿಯು ಆಜಾದ್ ಸಮಾಜವಾದಿ ಪಕ್ಷ (ಕಾನ್ಶೀರಾಂ)ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇಂಡಿಯನ್ ನೇಶನಲ್ ಲೋಕದಳ್ (ಐಎನ್ ಎಲ್‌ಡಿ) ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ತನ್ನ ಸ್ವಂತ ಬಲದಲ್ಲೇ ಈ ಬಾರಿ ಸ್ಪರ್ಧೆಗಿಳಿದಿದ್ದು ತೃತೀಯ ಬಾರಿಯೂ ಅಧಿಕಾರಕ್ಕೇ ರುವ ಸಾಧ್ಯತೆ ಇದೆ.
ಜಮ್ಮು ಕಾಶ್ಮೀರದ 90 ಸ್ಥಾನಗಳ ಪೈಕಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕೂಟ ಮೇಲುಗೈ ಸಾಧಿಸಿದೆ. ಇಲ್ಲಿ ಇಂಡಿಯಾಒಕ್ಕೂಟ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 28 ಕ್ಷೇತ್ರಗಳಲ್ಲಿ, ಪಿಡಿಪಿ 4೪ ಮತ್ತು ಇತರರು 10 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.