ಹಲವು ಪ್ರಕರಣಗಳ ಆರೋಪಿ : ಕಾಪಾ ಪ್ರಕಾರ ಬಂಧನ
ಕಾಸರಗೋಡು: ಹಲವು ಅಪರಾಧ ಪ್ರಕರಣಗಳ ಆರೋಪಿಯ ಮೇಲೆ ಕಾಸರಗೋಡು ಪೊಲೀಸರು ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿದ್ದಾರೆ.
ಕಾಸರಗೋಡು ಬಟ್ಟಂಪಾರೆ ನಿವಾಸಿ ಹಾಗೂ ಈಗ ಕೂಡ್ಲು ವಿವೇಕಾನಂದ ನಗರದಲ್ಲಿ ವಾಸಿಸುತ್ತಿರುವ ಕೆ. ಮಹೇಶ್ (31) ಬಂಧಿತ ಆರೋಪಿ. ಈತನ ವಿರುದ್ಧ ಕಾಸರಗೋಡು ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಾಗಿ ಹಲವು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನರಹತ್ಯಾ ಯತ್ನ, ಕೊಲೆ, ಕೊಲೆಯತ್ನ, ಗೂಂಡಾಗಿರಿ ಇತ್ಯಾದಿ ಹಲವು ಪ್ರಕರಣಗಳಲ್ಲಿ ಬಂಧಿತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2017, 2021, 2022, 2023 ಮತ್ತು 2024ರಲ್ಲಿ ಈತನನ್ನು ಬಂಧಿಸಿ ಇದೇ ಜೈಲಿನಲ್ಲಿರಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.