ಹಲವೆಡೆಗಳಲ್ಲಿ ಅಬಕಾರಿ ಕಾರ್ಯಾಚರಣೆ: ಮದ್ಯ ವಶ
ಕಾಸರಗೋಡು: ಅಬಕಾರಿ ತಂಡ ವಿವಿಧೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಗಳಲ್ಲಾಗಿ ಭಾರೀ ಪ್ರಮಾಣದ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಸೆರೆ ಹಿಡಿದು ಪ್ರಕರಣ ದಾಖಲಿಸಲಾಗಿದೆ.
ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಎ.ಬಿ ಥೋಮಸ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ತಪಾಸಣೆಯಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನೊಳಗೆ ಉಪೇಕ್ಷಿತ ಸ್ಥಿತಿಯಲ್ಲಿದ್ದ ೪.೫ ಲೀಟರ್ ಕರ್ನಾಟಕ ಮದ್ಯ ಪತ್ತೆ ಹಚ್ಚಿ ವಶಪಡಿಸಿದೆ. ಕಾಸರಗೋಡು ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಮದ್ಯ ಕೈವಶವಿರಿಸಿಕೊಂಡಿರುವ ವ್ಯಕ್ತಿಯನ್ನು ಸೆರೆ ಹಿಡಿಯಲಾಗಿದೆ. ಕುಂಬಳೆ ಕೊಪಾಡಿ ಕಡಪ್ಪುರದ ಪ್ರಕಾಶನ್ ಕೆ.ಎಸ್. (42) ಎಂಬಾತನಿಂದ ಈ ಮಾಲು ವಶಪಡಿಸಲಾಗಿದೆ. ಇದೇ ರೀತಿ ಕಾಸರಗೋಡು ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ.ಯವರ ನೇತೃತ್ವದ ಅಬಕಾರಿ ತಂಡ ಕಾಸರಗೋಡು ನಗರದಲ್ಲಿ ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಮದ್ಯ ಕೈವಶವಿರಿಸಿಕೊಂಡಿರುವುದಕ್ಕೆ ಸಂಬಂಧಿಸಿ ಪನೆಯಾಲ್ ಮೈಲಾಟಿಯ ವಾಮನನ್ ಎಂ. (45) ಎಂಬಾತನನ್ನು ಸೆರೆ ಹಿಡಿದು ಮದ್ಯ ವಶಪಡಿಸಲಾಗಿದೆ. ಮೊನ್ನೆ ಮಜಲ್‌ನ ಖಾಸಗಿ ಹಿತ್ತಿಲೊಂದರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ 18 ಎಂಎಲ್‌ನ 19 ಬಾಟಲ್ (3.42 ಲೀಟರ್) ಮದ್ಯ ಪತ್ತೆಹಚ್ಚಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.