ಹಳದಿ ಕಾಮಾಲೆ ಬಾಧಿಸಿ ಅಧ್ಯಾಪಿಕೆ ಮೃತ್ಯು
ಕಣ್ಣೂರು: ಹಳದಿಕಾಮಾಲೆ ಬಾಧಿಸಿ ಅಧ್ಯಾಪಿಕೆಯೊಬ್ಬರು ಮೃತಪಟ್ಟರು.
ಚಪ್ಪಾರಪದವು ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಏಂಬೆಟ್ಟ್ ನಿವಾಸಿ ಕೆ.ಪಿ. ಮಲ್ಲಿಕ (೪೮) ಎಂಬವರು ಮೃತಪಟ್ಟ ದುರ್ದೈವಿ. ಹಳದಿಕಾಮಾಲೆ ಬಾಧಿಸಿದ್ದ ಇವರನ್ನು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ತಳಿಪರಂಬ ನೋರ್ತ್ ಉಪಜಿಲ್ಲಾ ವೃತ್ತಿಪರಿಚಯ ಕ್ಲಬ್ನ ಕಾರ್ಯದರ್ಶಿಯಾಗಿದ್ದ ಮಲ್ಲಿಕ ಉತ್ತಮ ಸಂಘಟಕಿಯಾಗಿದ್ದರು.
ಚಪ್ಪಾರಪದವಿನ ನಿವೃತ್ತ ಅಧ್ಯಾಪಕ ಟಿ.ವಿ. ಮಣಿ-ಜಾನಕಿ ದಂಪತಿಯ ಪುತ್ರಿಯಾದ ಮೃತರು ಪತಿ ಬಾಬು (ಏಂಬೆಟ್ಟ್), ಮಕ್ಕಳಾದ ಅನಘ, ಯದುಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.