ಹಾಡಹಗಲೇ ಮನೆಗೆ ಕಳ್ಳರ ದಾಳಿ: ಕಿಟಿಕಿ ಮೂಲಕ ಒಳನುಗ್ಗಿ ಚಿನ್ನಾಭರಣ ಕಳವು
ಉಪ್ಪಳ: ಹಾಡಹಗಲೇ ಕಿಟಿಕಿ ತೆಗೆದು ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಚಿನ್ನಾಭರಣವನ್ನು ದೋಚಿದ ಘಟನೆ ಕುಂಜತ್ತೂರು ಬಳಿಯ ಕಣ್ವತೀರ್ಥದಲ್ಲಿ ನಡೆದಿದೆ.
ಉತ್ತರಪ್ರದೇಶ ನಿವಾಸಿ ಯೋಗೀಶ್ ಎಂಬವರು ವಾಸಿಸುವ ಬಾಡಿಗೆ ಮನೆಗೆ ನಿನ್ನೆ ಹಾಡಹಗಲೇ ಕಳ್ಳರು ನುಗ್ಗಿ ಎರಡೂವರೆ ಪವನ್ ಚಿನ್ನಾಭರಣ ಕಳವು ನಡೆಸಿದ್ದಾರೆ. ಯೋಗೀಶ್ ಇಲ್ಲಿ ಕುಟುಂಬ ಸಮೇತ ವಾಸಿಸಿ ಕೂಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ 9.30ಕ್ಕೆ ಇವರು ಕುಟುಂಬ ಸಮೇತ ಹೊರಗೆ ತೆರಳಿ ಮಧ್ಯಾಹ್ನ 2 ಗಂಟೆಗೆ ಮರಳಿ ಬಂದಿದ್ದಾರೆ. ಮನೆಯೊಳಗೆ ತೆರಳಿ ನೋಡಿದಾಗ ಬೆಡ್‌ರೂಂನಲ್ಲಿ ರುವ ಕಪಾಟಿನಿಂದ ಚಿನ್ನಾಭರಣ ಕಳವಿ ಗೀಡಾದ ಬಗ್ಗೆ ಅರಿವಿಗೆ ಬಂದಿದೆ. ಮನೆ ಗೋಡೆಯಿಂದ ಮರದ ಕಿಟಿಕಿ ತೆರವು ಗೊಳಿಸಿ ಕಳ್ಳರು ಒಳಗೆ ನುಗ್ಗಿದ್ದಾರೆ. ಕಳವು ಬಗ್ಗೆ ಯೋಗೀಶ್‌ರ ಪತ್ನಿ ಸೋನಲ್ ನಿಶಾದ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.