ಹಾಡಹಗಲೇ ಮನೆಯಿಂದ ನಗ-ನಗದು ಕಳವು ನಡೆಸಿದ ಆರೋಪಿ ಗಂಟೆಗಳೊಳಗೆ ಸೆರೆ

ಹೊಸದುರ್ಗ: ಹಾಡಹಗಲೇ ಮನೆಯ  ಬಾಗಿಲು ಮುರಿದು ಒಳನುಗ್ಗಿ ಹಣ ಹಾಗೂ ಚಿನ್ನಾಭರಣ ಕಳವು ನಡೆಸಿದ ಆರೋಪಿಯನ್ನು  ನೀಲೇಶ್ವರ ಪೊಲೀಸರು ಗಂಟೆಗಳೊಳಗೆ ಸೆರೆಹಿಡಿದಿದ್ದಾರೆ.,

ನಿನ್ನೆ ಸಂಜೆ 3.30 ಹಾಗೂ 4.30ರ ಮಧ್ಯೆ ಆಟೋ ರಿಕ್ಷಾ  ಚಾಲಕರ ಯೂನಿಯನ್ ನೀಲೇಶ್ವರ ಏರಿಯಾ ಸೆಕ್ರೆಟರಿ ಒ.ವಿ. ರವೀಂದ್ರನ್‌ರ  ಚಿರಪ್ಪುರಂ ಆಲಿನ್‌ಕೀಳ್ ಮಿನಿ ಸ್ಟೇಡಿಯಂ ಸಮೀಪದ ಮನೆಯಿಂದ  20 ಪವನ್ ಚಿನ್ನಾಭರಣ,10  ಸಾವಿರ  ರೂಪಾಯಿ  ಕಳವಿಗೀಡಾಗಿತ್ತು. ಈ ಬಗ್ಗೆ ದೂರು ಲಭಿಸಿದ ತಕ್ಷಣ ತನಿಖೆ ತೀವ್ರಗೊಳಿಸಿದ ಪೊಲೀಸರು ಆರೋಪಿ ಯನ್ನು ಗಂಟೆಗಳೊಳಗೆ ಬಂಧಿಸಿದ್ದಾರೆ.

ಕೊಟ್ಟಾರಕ್ಕರ ಏಳುಕ್ಕೋಣ್ ಇಡಕ್ಕಿಡಂ ಅಭಿವಿಹಾರ್‌ನ ಅಭಿ ರಾಜ್ (29) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಆರೋಪಿ ಕಲ್ಲಿಕೋಟೆಯತ್ತ ಪರಾರಿಯಾಗಿ ದ್ದಾನೆಂದು ಖಚಿತಪಡಿಸಿಕೊಂಡ ನೀಲೇಶ್ವರ ಪೊಲೀಸರು ಕೂಡಲೇ ಕಲ್ಲಿಕೋಟೆಗೆ ತೆರಳಿ  ಬಂಧಿಸಿದಾಗ ಕಳವು ನಡೆಸಿದ ಹಣ ಹಾಗೂ ಚಿನಾಭರಣಗಳನ್ನು ಈತನಿಂದ ಪೊಲೀಸರು ವಶಪಡಿಸಿಕೊಂ ಡಿದ್ದಾರೆ.

ಕಳವು ನಡೆದ ಮನೆಯ ಸಿಸಿ ಟಿವಿ  ಕ್ಯಾಮರಾದಲ್ಲಿ ಕಳ್ಳನ ಚಿತ್ರ ಸೆರೆಯಾಗಿತ್ತು. ಅದರ ಆಧಾರದಲ್ಲಿ ತನಿಖೆ ತೀವ್ರಗೊಳಿಸಿರುವುದೇ ತಕ್ಷಣ ಸೆರೆಹಿಡಿಯಲು ಸಹಾಯ ಕವಾಯಿತು.  ರವಿಚಂದ್ರನ್  ತಿರುವನಂತಪುರ ದಲ್ಲಿ ಉದ್ಯೋಗಿಯಾಗಿರುವ ಪುತ್ರಿ ರಮ್ಯಳ ಮಕ್ಕಳು ಕಲಿಯುವ ಬಂಗಳಂ ಕಕ್ಕಾಟ್ ಸರಕಾರಿ ಶಾಲೆಯಲ್ಲಿ  ನಿನ್ನೆ ಪಿಟಿಎ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಲು ರವೀಂದ್ರನ್‌ರ ಪತ್ನಿ ನಳಿನಿ ತೆರಳಿದ್ದರು. ಈ ಹೊತ್ತಿನಲ್ಲಿ ಕಳ್ಳ ಮನೆಗೆ ನುಗ್ಗಿ ನಗ-ನಗದು ಕಳವು ನಡೆಸಿದ್ದರು.

Leave a Reply

Your email address will not be published. Required fields are marked *

You cannot copy content of this page