ಮಂಜೇಶ್ವರ: ತೆಂಗಿನಕಾಯಿ ಬೆಲೆ ಗಗನಕ್ಕೇರುತ್ತಲೇ ಕಳವು ಕೂಡಾ ಹೆಚ್ಚತೊಡಗಿದೆ. ಕುಂಜತ್ತೂರಿನಲ್ಲಿ ಮನೆಯೊಂದರ ಶೆಡ್‌ನಲ್ಲಿರಿಸಿದ್ದ 200 ತೆಂಗಿನಕಾಯಿ ಕಳವಿಗೀಡಾದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರು ಕೊಳಕೆಯ ಹರೀಶ್ ಪಿ.ಕೆ. ಎಂಬವರ ಮನೆ ಬಳಿಯ ಶೆಡ್‌ನಿಂದ ತೆಂಗಿ ಕಾಯಿ ಕಳವಿಗೀಡಾದ ಬಗ್ಗೆ ದೂರಲಾ ಗಿದೆ. ಈ ತಿಂಗಳ 16ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ಮಧ್ಯೆ ಕಳವು ನಡೆದಿದೆ. ಅಂದು ಮನೆಯಲ್ಲಿ ಯಾರೂ ಇರಲಿಲ್ಲ. ಹೊರಗೆ ತೆರಳಿ ದವರು ಸಂಜೆ ಮರಳಿ ಬಂದಾಗಲೇ ಕಳವು ನಡೆದಿ ರುವುದು ಅರಿವಿಗೆ ಬಂದಿ ದೆ. ಇದರಿಂದ 8000 ರೂಪಾ ಯಿಗಳ ನಷ್ಟ ಅಂದಾಜಿ ಸಲಾಗಿ ದೆಯೆಂದು ದೂರಲಾಗಿದೆ.
