ಹಿರಣ್ಯದ ಆಯುರ್ವೇದ ಆಸ್ಪತ್ರೆ ಕಟ್ಟಡ ಬಳಿ ತ್ಯಾಜ್ಯ ರಾಶಿ: ಸ್ಥಳೀಯರಿಗೆ ರೋಗ ಭೀತಿ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಾಯಾರು ಹಿರಣ್ಯ ಎಂಬಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಆಯುರ್ವೇದ ಆಸ್ಪತ್ರೆ ಕಟ್ಟಡ ಪರಿಸರದಲ್ಲಿ ವಿವಿಧ ಕಡೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ರ‍್ಕಾ ಹಾಕಲಾಗಿದೆ. ಇದು ಮಳೆಗೆ ಕೊಳೆತು ಅಸುಪಾಸಿನ ಮನೆಗಳಲ್ಲಿ ವಾಸಿಸುವವರು ರೋಗಗಳಿಗೆ ತುತ್ತಾಗಿ ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ದೂರಲಾಗಿದೆ. ಇದರ ವಿರುದ್ದ ಊರವರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ಅಧೀನದ ಈ ಕಟ್ಟಡಲ್ಲಿ ಕಾರ್ಯಚರಿಸುತ್ತಿದ್ದ ಆಯುರ್ವೇದ ಆಸ್ಪತ್ರೆ ಹಲವು ವರ್ಷಗಳ ಹಿಂದೆ ಪೈವಳಿಕೆ ಪಂಚಾಯತ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಿರಣ್ಯದಲ್ಲಿರುವ ಕಟ್ಟಡ ಪಾಳು ಬಿದ್ದಿದ್ದು, ಇದರಲ್ಲಿ ಅಂಗಡಿ, ಮನೆಗಳಿಂದ ಹಸಿರು ಕ್ರಿಯÁಸೇನೆ ಕಾರ್ಯಕತೆðಯರು ಸಂಗ್ರಹಿಸಿದ ತ್ಯಾಜ್ಯವನ್ನು ತುಂಬಿಸಿಡಲಾಗಿದೆ. ಈ ತ್ಯಾಜ್ಯ ಮಳೆಗೆ ಶೋಚನೀಯವಸ್ಥೆಗೆ ತಲುಪಿದ್ದುದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಇದನ್ನು ತೆರವುಗೊಳಿಸಲು ಈ ಹಿಂದೆ ಊರವರು ಹಲವು ಬಾರಿ ಪಂಚಾಯತ್ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯÁವುದೇ ಪ್ರಯೋಜನ ಉಂಟಾಗಲಿಲ್ಲವೆAದು ದೂರಲಾಗಿದೆ. ಹಲವಾರು ಕಚೇರಿಗÀಳಿಗೆ ಬಾಡಿಗೆ ನೀಡಲಾಗುತ್ತಿದ್ದರೂ, ಖಾಲಿಯಿರುವ ಈ ಕಟ್ಟಡವನ್ನು ಉಪಯೋಗ ಶೂನ್ಯವಾಗಿಸುವುದು ಸರಿ ಅಲ್ಲವೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತ್ಯಾಜ್ಯವನ್ನು ತೆರವುಗೊಳಿಸಲು ಒತ್ತಾಯಿಸಿ ಕಾಂಗ್ರೆಸ್ ಪೈವಳಿಕೆ ಮಂಡಲ ಸಮಿತಿ ವತಿಯಿಂದ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಕೂಡಲೇ ಈ ತ್ಯಾಜ್ಯವನ್ನು ತೆರವುಗೊ ಳಿಸದಿದ್ದರೆ ಹೋರಾಟ ನಡೆಸಲಾಗು ವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page