ಹಿರಿಯ ಗುಮಾಸ್ತ ನಿಧನ
ಉಪ್ಪಳ: ಮೀಂಜ ಕೋರಿಕ್ಕಾರು ನಿವಾಸಿ ಹಿರಿಯ ಗುಮಾಸ್ತ, ಕೃಷಿಕ ಮಹಾಬಲ (74) ನಿಧನ ಹೊಂದಿದರು. ಇವರು ನಿನ್ನೆ ಸಂಜೆ ಬಾಯಾರಿನಿಂದ ಆಟೋದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿದ್ದು, ಪೈವಳಿಕೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಉಪ್ಪಳ ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ನಿಧನ ಸಂಭವಿಸಿದೆ. ಕಾಸರಗೋಡಿನಲ್ಲಿ ಗುಮಸ್ತರಾಗಿ ಹಲವು ವರ್ಷ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ಚರಣ್ ಕುಮಾರ್ (ಕ್ಯಾಂಪ್ಕೋ ಉದ್ಯೋಗಿ), ಕೀರ್ತನಾ, ಲತಾ, ಅನುಷಾ, ಸೊಸೆ ಪವಿತ್ರ, ಅಳಿಯಂದಿರಾದ ಶ್ರೀಜಿನ್, ವಿನಯ ಕುಮಾರ್, ದಿವಾಕರ, ಸಹೋದರರಾದ ಕೃಷ್ಣ ಬಂಗೇರ, ಲಿಂಗಪ್ಪ ಬಂಗೇರ, ರಾಮ ಬಂಗೇರ, ಸಹೋದರಿಯರಾದ ಸುಂದರಿ, ಲಕ್ಷ್ಮಿ, ಗೀತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮನೆಗೆ ವಿವಿಧ ರಾಜಕೀಯ ಮುಖಂಡರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.