ಹಿರಿಯ ಪತ್ರಕರ್ತ ನಿಧನ
ಕಾಸರಗೋಡು: ಹಿರಿಯ ಪತ್ರಕರ್ತ ಮುಸ್ಲಿಂ ಲೀಗ್ ನೇತಾರನಾದ ವಳವಕ್ಕಾಡ್ ನಿವಾಸಿ ವಿ.ಟಿ. ಶಾಹುಲ್ ಹಮೀದ್ (74) ನಿಧನ ಹೊಂದಿದರು. 1970ರಿಂದಲೇ ಚಂದ್ರಿಕ ಪತ್ರಿಕೆಯಲ್ಲಿ ಇವರು ಸೇವೆ ಆರಂಭಿಸಿದ್ದರು. ತೃಕ್ಕರಿಪುರ, ಪಯ್ಯನ್ನೂರು ಪಂಚಾಯತ್‌ಗಳಲ್ಲಿ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿಯಾಗಿ, ಎಸ್‌ಟಿಯು ಕಣ್ಣೂರು ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದಿದ್ದರು. ತೃಕ್ಕರಿಪುರ ಗ್ರಾಮ ಪಂಚಾಯತ್ ಆಡಳಿತ ಸಮಿತಿಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಎನ್.ಪಿ. ಮರಿಯಮ್ಮ, ಮಕ್ಕಳಾದ ಮುಹಮ್ಮದಲಿ, ನಿಸಾರ್, ಫಾತಿಮ, ರಶೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.