ಹಿರಿಯ ವ್ಯಾಪಾರಿ ನಿಧನ
ಉಪ್ಪಳ: ಇಲ್ಲಿನ ಭಗವತೀ ಗೇಟ್ ಬಳಿ ಸುಮಾರು 50 ವರ್ಷಗಳಿಂದ ವ್ಯಾಪಾರಿಯಾಗಿದ್ದ ಬಂಟ ಸಮುದಾಯದ ಹಿರಿಯ, ಭಗವತಿ ನಡುಮನೆಗುತ್ತು ಕುಟುಂಬ ಸದಸ್ಯ, ಪ್ರಗತಿಪರ ಕೃಷಿಕ ತಿಮ್ಮಪ್ಪ ಶೆಟ್ಟಿ (85) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಉಪ್ಪಳ ಶ್ರೀ ಸದಾಶಿವ ಕ್ಷೇತ್ರದ ಮಾಜಿ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಇವರ ಪತ್ನಿ ಸುಶೀಲ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ. ಇವರಿಗೆ ಮಕ್ಕಳಿಲ್ಲ.
ಮೃತರು ಸಹೋದರಿ ಜಯಂತಿ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಸೀತಾರಾಮ ಶೆಟ್ಟಿ, ಸಹೋದರಿ ಕಲ್ಯಾಣಿ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ.