ಹುಟ್ಟು ಹಬ್ಬದ ಮರುದಿನ ಯುವಕ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ
ಮಂಜೇಶ್ವರ: ಹುಟ್ಟುಹಬ್ಬದ ಮರುದಿನ ಯುವಕನೋರ್ವ ಮನೆ ಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಉದ್ಯಾವರ ಅಂಬಿ ತ್ತಾಡಿ ನಿವಾಸಿ ದಿ| ಭೋಜರ ಪುತ್ರ ಟೈಲ್ಸ್ ಕಾರ್ಮಿಕ ಚಂದ್ರಶೇಖರ ಅಲಿಯಾಸ್ ಚರಣ್ (42) ಆತ್ಮಹತ್ಯೆ ಗೈದವರು. ಇವರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಮೊನ್ನೆ ಇವರ ಹುಟ್ಟುಹಬ್ಬದ ದಿನವಾ ಗಿತ್ತು. ರಾತ್ರಿ ಊಟ ಮಾಡಿ ಮಲಗಿದ್ದು, ನಿನ್ನೆ ಮುಂಜಾನೆ ಮನೆಯೊಳಗೆ ಫ್ಯಾನ್‌ಗೆ ಶಾಲ್‌ನಿಂದ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿದ್ದರೂ ಆಗಲೇ ನಿಧನ ಸಂಭವಿಸಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆ ಪರಿಸರದಲ್ಲಿ ನಿನ್ನೆ ಸಂಜೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಾಯಿ ರೇವತಿ, ಪತ್ನಿ ಸವಿತ, ಮಕ್ಕಳಾದ ಗ್ರೀಷ್ಮ, ನೀಷ್ಮ, ಸಹೋದರ ಸತೀಶ್, ಸಹೋದರಿ ಭಾರತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಸಹಿತ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.