ಹುಡುಗರ ಮೇಲೂ ದೌರ್ಜನ್ಯಕಿರುಕುಳ ಅತೀ ಹೆಚ್ಚು ಮನೆಗಳಲ್ಲಿ

ಕಾಸರಗೋಡು: ಮಕ್ಕಳ ಮೇಲೆ ಶಾರೀರಿಕ ದೌರ್ಜನ್ಯ ಅತೀ ಹೆಚ್ಚು ನಡೆಯುವುದು ಮನೆಗಳಲ್ಲಿ ಎಂಬ ಆರೋಪವೂ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 2024ರಲ್ಲಿ 1535 ಮಕ್ಕಳ ಮೇಲೆ ಕಿರುಕುಳ ನಡೆದಿದೆ. ಈ ಪೈಕಿ 1004 ಮಕ್ಕಳು ಸ್ವಂತ ಮನೆಗಳಲ್ಲೇ ಕಿರುಕುಳಕ್ಕೊಳಗಾ ಗಿದ್ದಾರೆ. ಅದೇ ರೀತಿ ಶಾಲೆಗಳಲ್ಲಿ 133 ಮಂದಿ, ವಾಹನಗಳಲ್ಲಿ- 102, ಹೋಟೆಲ್ಗಳಲ್ಲಿ- 99, ಸ್ನೇಹಿತರ ಮನೆಗಳಲ್ಲಿ- 96, ಧಾರ್ಮಿಕ ಸಂಸ್ಥೆಗಳಲ್ಲಿ- 60 ಆಸ್ಪತ್ರೆಗಳಲ್ಲಿ- 29, ಚೈಲ್ಡ್ ಕೇರ್ ಕೇಂದ್ರಗಳಲ್ಲಿ 12 ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಿಸಲಾದ ಪೋಕ್ಸೋ ಪ್ರಕರಣಗಳನ್ನು ಪರಿಶೀಲಿ ಸಿದಾಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. 2021ರಲ್ಲಿ 3559 ಪೋಕ್ಸೋ ಕೇಸು ದಾಖಲಿಸ ಲಾಗಿತ್ತು. 2022ರಲ್ಲಿ ಆ ಸಂಖ್ಯೆ 4586ಕ್ಕೇರಿತು. 2023ರಲ್ಲಿ 4641, 2024ರಲ್ಲಿ 4549 ಹಾಗೂ 2025ರಲ್ಲಿ ಫೆಬ್ರವರಿವರೆಗೆ 888 ಪೋಕ್ಸೋ ಕೇಸು ದಾಖಲಾಗಿದೆ. ಚೈಲ್ಡ್ ಪ್ರೊಟೆಕ್ಷನ್ ಕಮಿಟಿ ನಡೆಸಿದ ಪರಿಶೀಲನೆಯಲ್ಲಿ ಗಂಡು ಮಕ್ಕಳ ಮೇಲೂ ಕಿರುಕುಳ ಹೆಚ್ಚುತ್ತಿರುವುದು ತಿಳಿದು ಬಂದಿದೆ. 2022ರಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 13 ಶೇ. ಹುಡುಗರ ಮೇಲೆ ನಡೆದ ಕಿರುಕುಳ ಬಗ್ಗೆ ಆಗಿತ್ತು. 2023ರಲ್ಲಿ 14 ಶೇ, 2024ರಲ್ಲಿ 18 ಶೇ.ಕ್ಕೇರಿತು. 7ರಿಂದ 12 ವರ್ಷದೊಳಗಿನ ಮಕ್ಕಳು ಅತೀ ಹೆಚ್ಚು ಕಿರುಕುಳಕ್ಕೊಳಗಾಗಿದ್ದಾರೆ. ಕಳೆದ ವರ್ಷ ಪೋಕ್ಸೋ ಕೇಸುಗಳು ಅತೀ ಹೆಚ್ಚು ದಾಖಲಾಗಿರುವುದು ತಿರುವನಂತಪುರ ಜಿಲ್ಲೆಯಲ್ಲಾಗಿದೆ. ಅತೀ ಕಡಿಮೆ ಕಾಸರಗೋಡು ಜಿಲ್ಲೆಯಲ್ಲಿ.

You cannot copy contents of this page