ಹೃದಯಾಘಾತದಿಂದ ವ್ಯಕ್ತಿ ನಿಧನ

ಕುಂಬಳೆ: ಪೆರುವಾಡ್ ಇರ್ಫಾನ ಮಂಜಿಲ್‌ನ ಬಶೀರ್ ಎಚ್.ಐ. (57) ಹೃದ ಯಾಘಾ ತದಿಂದ ನಿಧನ ಹೊಂದಿದರು. ಇಂದು ಮುಂಜಾನೆ 2 ಗಂಟೆಗೆ ನಿದ್ದೆಯಿಂದ ಎಚ್ಚೆತ್ತ ಇವರು ಎದೆನೋವು ಅನುಭವಗೊಂಡ ಬಗ್ಗೆ ಮನೆಯವರಲ್ಲಿ ತಿಳಿಸಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಂತೆ ನಿಧನ ಸಂಭವಿಸಿದೆ. ಬಶೀರ್ ಈ ಹಿಂದೆ ಗಲ್ಫ್ ಉದ್ಯೋಗಿ ಯಾಗಿದ್ದರು. ಮೃತರು ಪತ್ನಿ ರಮ್ಲ, ಮಕ್ಕಳಾದ ಇರ್ಫಾನ, ರಹಿಯಾನ, ಪರ್ಹಾನ, ಅಳಿಯಂದಿರಾದ ರಿಯಾಸ್, ಅಶ್ರಫ್, ಸುಬೈರ್, ಸಹೋದರ- ಸಹೋದರಿಯ ರಾದ ಮೊಹಮ್ಮದ್, ಇಬ್ರಾಹಿಂ, ಹಮೀದ್, ಅಬುಸಾಲಿ, ಹುಸೈನ್, ಲತೀಫ್ ಸಖಾಫಿ, ಸುಹರಾ, ಜೀನತ್ ಹಾಗೂ ಅಪಾರ ಬಂಧು-ಮಿತ್ರ ರನ್ನು ಅಗಲಿದ್ದಾರೆ. ಇನ್ನೋರ್ವ ಸಹೋ ದರಿ ಆಯಿಶ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page