ಹೃದಯಾಘಾತ: ಗೃಹಿಣಿ ನಿಧನ
ಉಪ್ಪಳ: ಹೃದಯಘಾ ತದಿಂದ ಗೃಹಿಣಿ ಯೋರ್ವೆ ನಿಧನ ಹೊಂದಿದ್ದಾರೆ. ಮುಳಿಂಜ ಕುಂಟುಪುಣಿ ನಿವಾಸಿ ದಿ| ನಾರಾಯಣ ಶೆಟ್ಟಿಯವರ ಪತ್ನಿ ಕುಸುಮ ಶೆಟ್ಟಿ (70) ನಿನ್ನೆ ಮಧ್ಯಾಹ್ನ ಕುಸಿದು ಬಿದ್ದು ನಿಧನರಾದರು. ಇವರು ಹಿರಿಯ ಕೃಷಿಕರಾಗಿದ್ದರು. ಮೃತರು ಮಕ್ಕಳಾದ ಸದಾನಂದ ಶೆಟ್ಟಿ, ರಾಜೇಶ್ ಶೆಟ್ಟಿ, ಸೊಸೆಯಂದಿರಾದ ಶಾರದಾ, ಅಂಬಿಕಾ, ಸಹೋದರ ಸಹೋದರಿಯರಾದ ಕೊರಗಪ್ಪ ಶೆಟ್ಟಿ, ವಿಶ್ವನಾಥ ಶೆಟ್ಟಿ, ಲಕ್ಷಿ÷್ಮÃ, ಚಂದ್ರಾವತಿ, ಸಾವಿತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.