ಹೃದಯಾಘಾತ: ಯುವಕ ಮೃತ್ಯು

ಮಂಜೇಶ್ವರ: ಹೃದಯ ಘಾತದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೀಯಪದವು ಅಮ್ಮೆನಡ್ಕ ನಿವಾಸಿ ಗಿಲ್‌ಬರ್ಟ್ ಡಿ ಸೋಜಾ ರವರ ಪುತ್ರ ಗ್ಲೇನ್ ಡಿ ಸೋಜಾ [32] ಮೃತಪಟ್ಟ ವ್ಯಕ್ತಿ. ಇವರು ವರ್ಕಾಡಿ ಸಮೀಪದಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಅವರಿಗೆ ಹೃದಯಘಾತ ಉಂಟಾಗಿದ್ದು, ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಕೊಲ್ಲಿಯಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದರು. ಮೃತರು ತಂದೆ, ತಾಯಿ ಪ್ಲೋಸಿ, ಪತ್ನಿ ಸ್ವೀಟ, ಸಹೋದರ ಗ್ಲಾನಿ ಡಿ ಸೋಜಾ, ಸಹೋದರಿ ಗ್ಲನಿಟ ಡಿ ಸೋಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page