ಹೆಚ್ಚಿದ ತಾಪಮಾನ: ಜಾಗ್ರತೆ ಪಾಲಿಸಲು ಕರೆ
ತಿರುವನಂತಪುರ: ಕೇರಳದ ಕೆಲವು ಕಡೆಗಳಲ್ಲಿ ಇಂದು ಸಾಧಾರಣಕ್ಕಿಂತಲೂ 2ರಿಂದ 3 ಡಿಗ್ರಿ ಸೆಲ್ಶಿಯಸ್ ವರೆಗೆ ತಾಪಮಾನ ಹೆಚ್ಚುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೆಚ್ಚಿದ ತಾಪಮಾನದಿಂದಾಗಿ ಬಿಸಿ ಉಂಟಾಗಿ ಅಸ್ವಸ್ಥತೆ ಸೃಷ್ಟಿಗೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ರಾಜ್ಯ ವಿಕೋಪ ನಿವಾರಣಾ ಪ್ರಾಧಿಕಾರ ಮುನ್ನೆಚ್ಚರಿಕೆ ನೀಡಿದೆ.
ಬೆಳಿಗ್ಗೆ 11ರಿಂದ ಸಂಜೆ 3 ಗಂಟೆವರೆಗಿರುವ ಸಮಯದಲ್ಲಿ ಸೂರ್ಯನ ಕಿರಣ ನೇರವಾಗಿ ದೇಹಕ್ಕೆ ಬೀಳದಂತೆ ಎಚ್ಚರ ವಹಿಸಬೇಕು, ಅಸ್ವಸ್ಥತೆ ಕಂಡುಬಂದರೆ ಕೂಡಲೇ ವೈದ್ಯರನ್ನು ಸಮೀಪಿಸಬೇಕು, ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಇತರ ಕಾಠಿಣ್ಯವಿರುವ ಕೆಲಸಗಳನ್ನು ಮಾಡುವವರು ತಮ್ಮ ಕೆಲಸದ ಸಮಯವನ್ನು ಕ್ರಮೀಕರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.