ಹೆಣ್ಮಕ್ಕಳ ಫೊಟೋ ಮೋರ್ಫ್ ಮಾಡಿ ಪ್ರಚಾರ ಯುವಕ ಸೆರೆ

ಕೊಚ್ಚಿ: ಹೆಣ್ಮಕ್ಕಳ ಭಾವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ನಿಂದ ತೆಗೆದು ಮೋರ್ಫ್ ಮಾಡಿ ಪ್ರಚಾರಪಡಿಸಿದ 23ರ ಹರೆಯದ ಯುವಕ ಸೆರೆಯಾಗಿದ್ದಾನೆ. ಕೋಟಯಂ ನಿವಾಸಿ ಅಮಲ್ ಮಿರ್ಸಾ ಸಲೀಂ ಸೆರೆಯಾದ ವ್ಯಕ್ತಿ. ಇನ್ಫೋ ಪಾರ್ಕ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೋಟಯಂ ನಿವಾಸಿಯಾದ ಯುವತಿ ಹಾಗೂ ಸಹೋದರಿ ಯರ ಚಿತ್ರಗಳನ್ನು ಇನ್‌ಸ್ಟಾ ಗ್ರಾಮ್‌ನಿಂದ ತೆಗೆದು ಮೋರ್ಫ್ ಮಾಡಿ ಪ್ರಚಾರಪಡಿಸಿರುವುದಾಗಿ ಈತನ ವಿರುದ್ಧ ಕೇಸು ದಾಖಲಿಸಲಾಗಿತ್ತು.  ಮೋರ್ಫ್ ಮಾಡಿದ ಚಿತ್ರಗಳನ್ನು ಆ ಯುವತಿಯರಿಗೇ ಕಳುಹಿಸಿದ ಈತ ಅದರ ಜೊತೆಯಲ್ಲಿ ಅಸಭ್ಯ ಸಂದೇಶವನ್ನೂ ಕಳುಹಿಸಿದ್ದಾನೆನ್ನ ಲಾಗಿದೆ. ದೂರು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page