ಹೆದ್ದಾರಿಯಲ್ಲಿ ಮಾತ್ರ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು: ಸರ್ವಿಸ್ ರಸ್ತೆಯಲ್ಲಿ ಕಾದು ನಿಲ್ಲುವ ಪ್ರಯಾಣಿಕರಿಗೆ ಸಮಸ್ಯೆ; ಪರಿಹಾರಕ್ಕಾಗಿ ಕಾಂಗ್ರೆಸ್ ಮಂಡಲ ಅಧ್ಯಕ್ಷರ ಮನವಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳ ನಿರ್ಮಾಣ ಕೆಲಸ ಅಂತಿಮ ಹಂತಕ್ಕೆ ತಲುಪಿರುವಾಗಲೇ ಕರ್ನಾಟಕ, ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳು ಸರ್ವೀಸ್ ರಸ್ತೆಗಿಳಿಯದೆ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುತ್ತಿವೆ ಎಂದು ಕಾಂಗ್ರೆಸ್ ಕುಂಬಳೆ ಮಂಡಲ ಅಧ್ಯಕ್ಷ ರವಿ ಪೂಜಾರಿ ಆರೋ ಪಿಸಿದ್ದಾರೆ. ಬಸ್‌ಗಳು ಹೆದ್ದಾರಿ ಮೂಲಕ ಸಂಚರಿಸುವುದರಿಂದ ಸರ್ವೀಸ್ ರಸ್ತೆಯಲ್ಲಿ ಬಸ್‌ಗಾಗಿ ಕಾದು ನಿಂತ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿ ಬರುತ್ತಿದೆ. ತಲಪಾಡಿಯಿಂದ ಕಾಸರಗೋಡು ವರೆಗಿನ ಪ್ರಯಾಣ ಮಧ್ಯೆ ವಿವಿಧ ಸ್ಟಾಪ್‌ಗಳಲ್ಲಿ ಬಸ್‌ಗಾಗಿ ಕಾದು ನಿಂತಿರುವವರನ್ನು ಹತ್ತಿಸದೆ ಬಸ್‌ಗಳು ಸಂಚರಿಸುತ್ತವೆ. ಇದರಿಂದಾಗಿ ಪ್ರಯಾಣಿಕರು ಗಂಟೆಗಳ ಕಾಲ ಕಾದು ನಿಲ್ಲಬೇಕಾಗಿ ಬರುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಆದಾಯ ಸಮಸ್ಯೆಯೇ ಅಲ್ಲ. ಸ್ಟಾಂಡ್‌ನಿಂದ ಹೊರಡುವ ಬಸ್‌ಗಳನ್ನು ಮರಳಿ ಅಲ್ಲಿಗೆ ತಲುಪಿಸಿದರೆ ಸಾಕೆಂಬ ನಿಲುವು ನೌಕರರದ್ದಾಗಿದೆಯೆಂದೂ ರವಿ ಪೂಜಾರಿ ಆರೋಪಿಸಿದ್ದಾರೆ. ಈ ವಿಷಯವನ್ನು ತಿಳಿಸಿ ಕಾಸರಗೋಡು ಆರ್‌ಟಿಒ ಹಾಗೂ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್‌ಗೆ ರವಿ ಪೂಜಾರಿ ಮನವಿ ಸಲ್ಲಿಸಿದ್ದಾರೆ.

You cannot copy contents of this page