ಹೆದ್ದಾರಿ ಸೂಚನಾ ಫಲಕಗಳಲ್ಲಿ ಕಣ್ಮರೆಯಾಗುತ್ತಿರುವ ಕನ್ನಡ: ಗಡಿ ಪ್ರಾಧಿಕಾರದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ

ಕಾಸರಗೋಡು: ಸ್ಥಳ ನಾಮಗಳು, ಸೂಚನಾ ಫಲಕಗಳು ಆ ಪ್ರದೇಶದ ಭಾಷಾ ಪರವಾದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನಾಯಕರ ಹೋರಾ ಟದ ಫಲವಾಗಿ ಕಂಡುಬರುತ್ತಿದ್ದ ಸ್ಥಳ ಸೂಚಕ ಫಲಕಗಳು ಈಗ ಕಣ್ಮರೆ ಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿ ಯಲ್ಲಿ ಅಲ್ಲಲ್ಲಿ ಕಂಗೊಳಿಸುತ್ತಿದ್ದ ಕನ್ನಡ ಅಕ್ಷರಗಳು ಹೆದ್ದಾರಿ ಅಭಿವೃದ್ಧಿ ವೇಳೆ ಮಣ್ಣಿನಡಿಗೆ ಬಿದ್ದಿದ್ದು, ಈಗ ಅದು ಕಣ್ಮರೆ ಯಾಗಿದೆ. ಹೆದ್ದಾರಿ ನವೀಕೃತಗೊಂಡು ಸಂಚಾರಕ್ಕೆ ತೆರೆದುಕೊಡಲು  ಸಿದ್ಧತೆ ನಡೆಯುತ್ತಿರುವ ಮಧ್ಯೆ ಅಲ್ಲಲ್ಲಿ ಸ್ಥಾಪಿಸುವ ಸ್ಥಳ ಸೂಚಕ ಫಲಕಗಳಲ್ಲಿ ಕನ್ನಡ ಎತ್ತಂಗಡಿಯಾಗಿದೆ. ಇದು ಈ ಪ್ರದೇಶದಲ್ಲಿ ಈ ಮೊದಲು ಕನ್ನಡವಿ ತ್ತು ಎಂಬುದನ್ನು ಮರೆಮಾಚುತ್ತಿದೆ.

ಹೆದ್ದಾರಿ ಬದಿಗಳಲ್ಲಿ ಸ್ಥಾಪಿಸುವ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಅಳವಡಿಸಬೇಕೆಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಭಾರತೀಯ ಹೆದ್ದಾರಿ ಪ್ರಾಧಿಕಾರದ ಚೀಫ್ ಇಂಜಿನಿಯರ್‌ಗೆ ಮನವಿ ನೀಡಿದ್ದಾರೆ. ಈಗ ಸ್ಥಾಪಿಸಿದ ಫಲಕಗ ಳಲ್ಲಿ ಮಲಯಾಳ, ಇಂಗ್ಲಿಷ್ ಮಾ ತ್ರವಿದ್ದು,  ಭಾಷಾ ಅಲ್ಪಸಂಖ್ಯಾತರು ವಾಸಿಸುವ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಕನ್ನಡದದಲ್ಲೂ ಬೋರ್ಡ್ ಸ್ಥಾಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಾಸರಗೋಡು ಜಿಲ್ಲೆ ಈ ಹಿಂದೆ ಕನ್ನಡ ಪ್ರದೇಶವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಲು ಈಗ ಉಳಿದಿರುವ ಮಾರ್ಗ ಬೋರ್ಡ್‌ಗಲ್ಲಾದರೂ ಕನ್ನಡ ಅಕ್ಷರ ಕಾಣುವಂತೆ ಮಾಡುವುದಾಗಿದೆ. ಆದರೆ ಅದು ಕೂಡಾ ಮರೆಯಾದರೆ ಕನ್ನಡ ಎಂಬ ಭಾಷೆ ಕಾಸರಗೋಡಿನ ಮಣ್ಣಿನಿಂದ ಕಣ್ಮರೆಯಾಗಲಿದೆ. ಅದಕ್ಕೆ ಅವಕಾಶ ನೀಡದಿರಲು ಕನ್ನಡಿಗರು ಪ್ರಯತ್ನಿಸಬೇಕಾಗಿದೆಯೆಂದು ಕರ್ನಾಟಕ ಗಡಿಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಎಚ್ಚರಿ ಸಿದ್ದಾರೆ. ಮನವಿಯ ಪ್ರತಿಯನ್ನು ಚೆನ್ನೈಯಲ್ಲಿರುವ ಭಾಷಾ ಅಲ್ಪಸಂ ಖ್ಯಾತ ಸಚಿವಾಲಯದ ಅಸಿಸ್ಟೆಂಟ್ ಕಮಿಶನರ್‌ಗೂ ರವಾನಿಸಲಾಗಿದೆ ಯೆಂದು ಅವರು ತಿಳಿಸಿದ್ದಾರೆ.

RELATED NEWS

You cannot copy contents of this page