ಹೈದರಾಬಾದ್‌ನಲ್ಲಿ ಸ್ಫೋಟಕ ಸಂಚು ಹೂಡಿದ ಉಗ್ರರಿಬ್ಬರ ಬಂಧನ
ಹೈದರಾಬಾದ್: ಹೈದರಾಬಾದ್ ನಗರದಲ್ಲಿ ಸ್ಫೋಟಕ ಸಂಚು ರೂಪಿಸಿದ್ದ ಇಬ್ಬರು ಉಗ್ರರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಭಯೋತ್ಪಾದಕ ಪ್ರಯತ್ನ ವನ್ನು ವಿಫಲಗೊಳಿಸಿದ್ದಾರೆ. ಬಂಧಿತ ರನ್ನು ಸಿರಾಜು ಉರ್ ರೆಹ್ಮಾನ್ (29) ಮತ್ತು ಸೈಯರ್ ಸಮೀರ್ (28) ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದ ಐಸಿಸ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿರುವ ಉಗ್ರರಾಗಿದ್ದಾರೆಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ.