ಹೊಂಡಕ್ಕೆ ಬಿದ್ದ ಶಾಲಾ ವಾಹನ: ತಪ್ಪಿದ ಅಪಾಯ
ಕಾಸರಗೋಡು: ವಿದ್ಯಾನಗರ-ಮಾನ್ಯ ರಸ್ತೆಯ ಬಾರಿಕ್ಕಾಡ್ ತಿರುವಿನಲ್ಲಿ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಇಂದು ಬೆಳಿಗ್ಗೆ 8.30ರ ವೇಳೆ ಮಾನ್ಯದ ಖಾಸಗಿ ಶಾಲೆಯ ವ್ಯಾನ್ ಅಪಘಾತಕ್ಕೀಡಾಗಿದೆ. ಘಟನೆ ವೇಳೆ ವ್ಯಾನ್‌ನಲ್ಲಿ 6ಮಂದಿ ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾ ಗಿವೆ. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಈ ರಸ್ತೆಯ ವಿವಿಧೆಡೆ ತಿರುವುಗಳಿದ್ದು, ಇದು ವಾಹನಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ. ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿರುವುದರಿಂದ ಕೆಲವೊಮ್ಮೆ ವಾಹನಗಳು ನಿಯಂತ್ರಣ ತಪ್ಪಲು ಕಾರಣವಾಗುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.