ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಬಾಲಕರು ಮೃತ್ಯು

ಕಲ್ಲಿಕೋಟೆ: ಕುಟ್ಯಾಡಿ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಮಕ್ಕಳು ಮುಳುಗಿ ಮೃತಪಟ್ಟರು. ಕುಟ್ಯಾಡಿ ಪಾರಕ್ಕಡವ್ ನಿವಾಸಿಗಳಾದ ರಿಸ್ವಾನ್ (14), ಸಿನಾನ್ (14) ಎಂಬೀ ಬಾಲಕರು ಮೃತಪಟ್ಟಿದ್ದಾರೆ. ಹೊಳೆಗೆ ಸ್ನಾನಕ್ಕಿಳಿದಾಗ ನೀರಿನ ಹರಿವಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಇವರಿಬ್ಬರೂ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಓರ್ವ ನೀರಿನ ಸೆಳೆತಕ್ಕೆ ಸಿಲುಕಿದಾಗ ಆತನನ್ನು ರಕ್ಷಿಸಲು ಪ್ರಯತ್ನಿಸಿದ ವೇಳೆ ಇನ್ನೋರ್ವನೂ ಮುಳುಗಿರುವುದಾಗಿ ಹೇಳಲಾಗುತ್ತಿದೆ. ಸ್ಥಳೀಯ ಅಗ್ನಿಶಾಮಕದಳ ತಲುಪಿ ಮೃತದೇಹಗಳನ್ನು ಮೇಲೆತ್ತಲಾಗಿದೆ. ಬಳಿಕ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

You cannot copy contents of this page