ಹೊಸಂಗಡಿಯಲ್ಲಿ ನೂತನ ರಸ್ತೆಯಲ್ಲಿ ವಾಹನ ಸಂಚಾರ: ಪೇಟೆಯಲ್ಲಿ ಕಡಿಮೆಗೊಂಡ ವಾಹನಗಳ ದಟ್ಟಣೆ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಹೊಸಂಗಡಿಯಲ್ಲಿ ನಿರ್ಮಿಸಿದ ನೂತನ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ. ಪೇಟೆಯಲ್ಲಿ ನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ಇದರಿಂದಾಗಿ ಕಡಿಮೆಗೊಂಡಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಹೊಸಂಗಡಿ ಪೇಟೆಯಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದಕ್ಕೆ ಕೆಳಭಾಗದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಮಂಗಳೂರು ಭಾಗದಿಂದ ಕಾಸರಗೋಡು ಕಡೆಗಳಿಗೆ ವಾಹನಗಳು ಈಗ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿದೆ. ಇದೀಗ ಮೇಲ್ಭಾಗದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಗೊಂಡಿರುವುದು ಬಸ್‌ಗಳ ಸಂಚಾರ ಸುಗಮಗೊಂಡಿದೆ. ಎರಡು ಸರ್ವೀಸ್ ರಸ್ತೆ ಕಾಮಗಾರಿ ಭರದಿಂದ  ಸಾಗುತ್ತಿದೆ. ಶೀಘ್ರದಲ್ಲೇ ಪೂರ್ತಿಗೊಳಿಸಿದ ಬಳಿಕ ಮಧ್ಯ ಭಾಗದ ಹೆದ್ದಾರಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ತಲಪಾಡಿಯಿಂದ ಪೊಸೋಟು ತನಕ ಸರ್ವೀಸ್ ಹಾಗೂ ಹೆದ್ದಾರಿ ರಸ್ತೆ ಕೆಲಸ ಪೂರ್ತಿಗೊಂಡಿದೆ.

You cannot copy contents of this page