ಹೊಸಂಗಡಿಯ ಸ್ಟುಡಿಯೋ ಮಾಲಕ ನಿಧನ
ಮಂಜೇಶ್ವರ: ಹೊಸಂಗಡಿಯ ಲ್ಲಿರುವ ಹೈಟೆಕ್ ಸ್ಟುಡಿಯೋ ಮಾಲಕ ಮಂಜೇಶ್ವರ ಅರಿಬೈಲು ನಿವಾಸಿ ಚಿದಾನಂದ (57) ನಿಧನಹೊಂದಿದರು.
ಕಳೆದ ಎರಡು ವರ್ಷಗಳಿಂದ ಇವರಿಗೆ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಚಿಕಿತ್ಸೆಯಲ್ಲಿದ್ದ ಇವರಿಗೆ ಇತ್ತೀಚೆಗೆ ಅಸೌಖ್ಯ ಉಲ್ಭಣಗೊಂಡಿತ್ತು. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ.
ಸಂಜೀವ ಮಡಿವಾಳ-ಪದ್ಮಾಪತಿ ದಂಪತಿಯ ಪುತ್ರನಾದ ಮೃತರು ಪತ್ನಿ ರೋಹಿಣಿ, ಮಕ್ಕಳಾದ ಸಾಗರ್, ಸಾತ್ವಿಕ್, ಸಹೋದರಿ ಪ್ರಫುಲ್ಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಶಿವಾನಂದ ಈ ಹಿಂದೆ ನಿಧನರಾಗಿದ್ದಾರೆ.