ಹೊಸ ಕಾರಿನಲ್ಲಿ ಸಾಗಿಸುತ್ತಿದ್ದ 21. 5 ಗ್ರಾಂ ಎಂಡಿಎಂಎ ವಶ: ಉಪ್ಪಳ, ಕಾಸರಗೋಡು ನಿವಾಸಿಗಳಾದ 5 ಮಂದಿ ಸೆರೆ
ಕುಂಬಳೆ: ಹೊಸ ಕಾರಿನಲ್ಲಿ ಕುಂಬಳೆ ಭಾಗಕ್ಕೆ ಸಾಗಿಸುತ್ತಿದ್ದ ಮಾರಕ ಮಾದಕ ವಸ್ತುವಾದ ಎಂಡಿಎಂಎಯನ್ನು ಕುಂಬಳೆ ಪೊಲೀಸರು ಹಾಗೂ ಟಾನ್ಸಾಫ್ ತಂಡ ನಡೆಸಿದ ಸಂಯುಕ್ತ ಕಾರ್ಯಾಚರಣೆ ಯಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕಾರನ್ನು ವಶಕ್ಕೆ ತೆಗೆಯಲಾಗಿದೆ. ಉಪ್ಪಳ ಕೋಡಿಬೈಲು ನಿವಾಸಿ ಇಬ್ರಾಹಿಂ ಸಿದ್ದಿಕ್ (33), ಉಪ್ಪಳ ಪ್ರತಾಪ್‌ನಗರ ನಿವಾಸಿ ಮೂಸಾ ಶರೀಫ್ (30), ಕಾಸರ ಗೋಡು ಅಡ್ಕತ್ತಬೈಲು ನಿವಾಸಿಗಳಾದ ಮೊಹಮ್ಮದ್ ಸಾಲಿ (46), ಮೊಹ ಮ್ಮದ್ ಸವಾದ್ (28) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆ.
ಇವರ ಕೈಯಿಂದ 21.5 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಕುಂಬಳೆ ಭಾಗಕ್ಕೆ ಮಾದಕವಸ್ತು ಸಾಗಾಟವಾಗು ತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಿ. ಶಿಲ್ಪಾರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಇದರಂತೆ ಎಸ್ಪಿಯವರ ನಿರ್ದೇಶ ಮೇರೆಗೆ ಕುಂಬಳೆ ಪೊಲೀಸರು ಹಾಗೂ ಟಾನ್ಸಾಫ್ ತಂಡ ನಿನ್ನೆ ರಾತ್ರಿ ಚೇವಾರು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಆಗಮಿಸಿದ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್ ತಂಡ ತಪಾಸಣೆ ನಡೆಸಿದಾಗ ಕಾರಿನೊಳಗೆ ಎಂಡಿಎಂಎ ಬಚ್ಚಿಟ್ಟಿರುವುದು ಕಂಡು ಬಂದಿದೆ. ಬಂಧಿತ ಆರೋಪಿಗಳ ಪೈಕಿ ಉಪ್ಪಳ ಕೋಡಿಬೈಲಿನ ಇಬ್ರಾಹಿಂ ಸಿದ್ಧಿಕ್ ಈ ಹಿಂದೆ ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಸೆರೆಗೀಡಾಗಿ ೫ ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ. ಕೆ. ಶ್ರೀಜೇಶ್, ಎಎಸ್‌ಐ ಮನೋಜ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಚಂದ್ರನ್, ಶರತ್, ಟಾನ್ಸಾಫ್ ತಂಡದ ರಜೀಶ್ ಕಾಟಾಂಬಳ್ಳಿ, ನಿಖಿಲ್ ಎಂಬಿವರು ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕವಸ್ತು ಪತ್ತೆಹಚ್ಚಿ ವಶಪಡಿಸಲಾಗಿದೆ.