ಹೊಸ ಕ್ರಿಮಿನಲ್ ಕಾನೂನು ಸೋಮವಾರದಿಂದ ಜ್ಯಾರಿ
ನವದೆಹಲಿ: ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ -2023 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ-2023ಎಂಬ ಮೂರು ಹೊಸ ಕ್ರಿಮಿನಲ್ ಕಾನೂನುಗಳು ದೇಶದಲ್ಲಿ ಮುಂದಿನ ಸೋಮವಾರ (ಜುಲೈ 1)ರಿಂದ ವಿದ್ಯುಕ್ತವಾಗಿ ಜ್ಯಾರಿಗೆ ಬರಲಿದೆ. ಇದಕ್ಕಿರುವ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ತರಬೇತಿ ಪ್ರಕ್ರಿಯೆ ಪ್ರತಿ ಹಂತದಲ್ಲೂ ನಡೆಯುತ್ತಿವೆ.
ಈ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜ್ಯಾರಿಗೊಳ್ಳುವ ಮೂಲಕ ಬ್ರಿಟೀಷ್ ಯುಗದ ಕಾನೂನು ಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾನೂನುಗಳು ಕಣ್ಮರೆಯಾಗಿ ಸೋಮವಾರದಿಂದ ಅವುಗಳು ಇತಿಹಾಸದ ಪುಟಕ್ಕೆ ಹೋಗಿ ಸೇರಲಿದೆ.
ಎಫ್‌ಐಆರ್ (ಪ್ರಾಥಮಿಕ ತನಿಖಾ ವರದಿ) ನೋಂದಾವಣೆ ಸೇರಿದಂತೆ ಹೊಸ ಕ್ರಿಮಿನಲ್ ಕಾನೂನುಗಳೊಂದಿಗೆ ತಂತ್ರಜ್ಞಾನ ಹೊಂದಾಣಿಕೆಗೆ ಅನುಕೂಲಕರವಾಗು ವಂತೆ ಅಸ್ತಿತ್ವದಲ್ಲಿರುವ ಸಿಸಿಟಿಎನ್‌ಎಸ್ ಅಪ್ಲಿಕೇಶನ್‌ನಲ್ಲಿ 23 ಕ್ರಿಯಾತ್ಮಕ ಮಾರ್ಪಾಡು ಮಾಡಲಾಗಿದೆ. ಈ ಹೊಸ ವ್ಯವಸ್ಥೆಗೆ ತಡೆರಹಿತ ಪರಿ ವರ್ತನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಂತ್ರಿಕ ಬೆಂಬಲ ಒದಗಿಸಲಾಗುತ್ತಿದೆ. ಹೊಸ ಕ್ರಿಮಿನಲ್ ಅನುಷ್ಠಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರಂತರ ಪರಿಶೀಲನೆ ಹಾಗೂ ಸಹಾಯಕ್ಕಾಗಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ಸುರಕ್ಷಿತ ಕ್ಲ್ವಾಡ್ ಸ್ಟೋರೇಜ್‌ನಿಂದ ಬೆಂಬಲಿತವಾದ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸ ಲಾಗಿದೆ ಮತ್ತು ಅಪರಾಧ ದೃಶ್ಯ ವೀಡಿಯೋಗ್ರಾಫಿ ಮತ್ತು ವಿಧಿ ವಿಜ್ಞಾನ ಪುರಾವೆಗಳ ಸಂಗ್ರಹವು ಒಳಗೊಂಡಿ ರುತ್ತದೆ. ಕಳೆದ ಮಾರ್ಚ್ 14ರಂದು ಎನ್‌ಸಿಆರ್‌ಬಿ ಕಂಪೈಲೇಶನ್ ಆಫ್ ಕ್ರಿಮಿನಲ್ ಲಾಸ್ ಎಂಬ ಮೊಬೈಲ್ ವೆಬ್ ಅಪ್ಲಿಕೇಶನ್ ಪ್ರಾರಂಭಿಸಲಾ ಗಿದೆ. ಪ್ರಸ್ತುತ ಇದು ಸುಮಾರು 1.2 ಲಕ್ಷ ಬಳಕೆದಾರರನ್ನು ಹೊಂದಿದೆ. ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಅಪರಾಧ ದೃಶಗಳ ವೀಡಿ ಯೋಗ್ರಾಫಿ, ಛಾಯಾಗ್ರಹಣ ನ್ಯಾಯಾಂಗ ವಿಚಾರಣೆಗಳು ಮತ್ತು ಸಮನ್ಸ್‌ಗಳನ್ನು ವಿದ್ಯುನ್ಮಾನವಾಗಿ ಕಳುಹಿಸಿಕೊಡಲು ಅನುಕೂಲಕರ ವಾಗುವಂತೆ ಇ-ಸಾಕ್ಷ್ಯ, ನ್ಯಾಯಶೃತಿ ಮತ್ತು ಇ-ಸಮನ್ಸ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೇಶದ ಎಲ್ಲಾ ಪೊಲೀಸ್ ಠಾಣೆಗಳು ಜುಲೈ 1ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾ ಗಿದೆ. ಇದರಂತೆ ದೇಶಾದ್ಯಂತ ಎಲ್ಲಾ 17,500 ಪೊಲೀಸ್ ಠಾಣೆಗಳಲ್ಲಿ ಅಂದು ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಹಿರಿಯ ನಾಗರಿಕರು ಮತ್ತು ಗಣ್ಯ ವ್ಯಕ್ತಿಗಳಿಗೆ ಈ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಪ್ರಮುಖ ಲಕ್ಷಣಗಳ ಬಗ್ಗೆ ಅರಿವು ಮೂಡಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮೂರು ಕಾನೂನುಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಇನ್ನು ಆನ್ ಲೈನ್‌ನಲ್ಲಿ ದೂರು ದಾಖಲಿಸುವುದು, ಹಾಜರಾಗಲು ಇಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಮನ್ಸ್ ಕಳುಹಿಸಿಕೊಡುವುದು ಮತ್ತು ಎಲ್ಲಾ ಘೋರ ಅಪರಾಧ ಸ್ಥಳಗಳಿಗೆ ಕಡ್ಡಾಯ ಮೇಲ್ವಿಚಾರಣೆ ಇತ್ಯಾದಿ ಸೇರಿದೆ.