ಹೊಸ ತಲೆಮಾರು ಸ್ವಾತಂತ್ರ್ಯದ ಕಾವಲುಗಾರರಾಗಬೇಕು-ಸಚಿವ ಕೆ. ಕೃಷ್ಣನ್ ಕುಟ್ಟಿ
ಕಾಸರಗೋಡು: ನಮ್ಮ ಹೊಸ ತಲೆಮಾರು ಭಾರತದ ಸ್ವಾತಂತ್ರ್ಯ ವನ್ನು ರಕ್ಷಿಸುವ ಕಾವಲುಗಾರರಾ ಗಬೇಕೆಂದು ರಾಜ್ಯ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಕರೆನೀಡಿದ್ದಾರೆ.
ನಿನ್ನೆ ಕಾಸರಗೋಡು ವಿದ್ಯಾನಗರ ದಲ್ಲಿರುವ ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಭಾರತದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣಗೈದ ಬಳಿಕ ನಡೆದ ಪರೇಡ್‌ನಲ್ಲಿ ಧ್ವಜವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಾ ಈ ಕರೆ ನೀಡಿದ್ದಾರೆ.
ಅರಾಜಕತೆ ಚಿಂತನೆಯಲ್ಲಿ ತೊಡಗದೆ ಹೊಸ ತಲೆಮಾರು ಹೊಸ ಚಿಂತನೆ ಅಳವಡಿಸಿಕೊಂಡು ಮಾನವೀ ಯತೆಯನ್ನು ಮೈಗೂಡಿಸಬೇಕು. ಮಾನವೀಯತೆ ಮೇಲೆ ದಾಳಿ ಉಂಟಾಗುವ ವೇಳೆ ಅವರ ವಿರುದ್ಧ ಎಲ್ಲರೂ ಸೆಟೆದು ನಿಂತು ಅಂತಹ ಯಾವುದೇ ಯತ್ನಗಳನ್ನು ವಿಫಲಗೊಳಿಸುವುದು ಮಾತ್ರವಲ್ಲ ಅಂತಹ ವೇಳೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದ ಎಲ್ಲರಿಗೆ ಅಗತ್ಯದ ಎಲ್ಲಾ ರೀತಿಯ ಸಹಾಯ ಒದಗಿಸಲು ನಾವು ಮುಂದಾಗಬೇಕು. ಅದಕ್ಕಾಗಿ ಮುಖ್ಯಮಂತ್ರಿಯವರ ವಿಪತ್ತು ನಿರ್ವಹಣಾ ನಿಧಿಗೆ ಅಗತ್ಯದ ದೇಣಿಗೆ ನೀಡಿ ಸಹಾಯ ಒದಗಿಸುವಂತೆಯೂ ಇದೇ ಸಂದರ್ಭದಲ್ಲಿ ಸಚಿವರು ವಿನಂತಿಸಿಕೊಂಡರು. ಮಾತ್ರವಲ್ಲ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಚಿವರು ಸಂತಾಪ ಸೂಚಿಸಿದರು. ದೇಶದ ಧರ್ಮನಿರ ಪೇಕ್ಷತೆ ಮೇಲೆ ಇಂದು ಗಂಭೀರ ದಾಳಿಗಳು ನಡೆಯುತ್ತಿವೆ. ದೇಶದಲ್ಲಿ ಕೋಮುವಾದ ಹಾಗೂ ಕಾರ್ಪರೇಟ್ ಕಾರ್ಯಸೂಚಿಗಳನ್ನು ಜ್ಯಾರಿಗೊಳಿಸುವ ಯತ್ನಗಳನ್ನು ನಡೆಸಲಾಗುತ್ತಿದೆ. ಅಂತಹ ಎಲ್ಲಾ ಯತ್ನಗಳ ವಿರುದ್ಧ ನಾವೆಲ್ಲಾ ಸಂಘಟಿತರಾಗಿ ಬೋರಾಡಬೇಕು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿನೋ ಇದೇ ಸಂದರ್ಭದಲ್ಲಿ ಮಾತನಾಡಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್, ಇ. ಚಂದ್ರಶೇಖರನ್,ಎಂ. ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ ಕ್ಯಾ. ಕೆ.ಎಂ.ಕೆ. ನಂಬ್ಯಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪೊಲೀಸರು, ವಿದ್ಯಾರ್ಥಿಗಳು, ಅಬಕಾರಿ ತಂಡ, ಅರಣ್ಯ, ಸ್ಟೂಡೆಂಟ್ ಪೊಲೀಸ್, ಎನ್‌ಸಿಸಿ ಮೊದ ಲಾದವರಿಂದ ಇದೇ ಸಂದರ್ಭದಲ್ಲಿ ಆಕರ್ಷಕ ಪಥಸಂಚಲನವೂ ನಡೆಯಿತು.