ಹೊಸ ಬಸ್ ನಿಲ್ದಾಣದಿಂದ ರೈಲ್ವೇ ಸ್ಟೇಷನ್‌ವರೆಗೆ ಆಕಾಶಮಾರ್ಗ ನಿರ್ಮಾಣಕ್ಕೆ ಛೇಂಬರ್ ಆಫ್ ಕಾಮರ್ಸ್ ಮನವಿ
ಕಾಸರಗೋಡು: ಹೊಸ ಬಸ್ ನಿಲ್ದಾ ಣದಿಂದ ಹಳೆ ಬಸ್ ನಿಲ್ದಾಣದ ಮೂಲಕ ರೈಲ್ವೇ ನಿಲ್ದಾಣದ ವರೆಗೆ ಹಾಗೂ ಮಲ್ಲಿಕಾ ರ್ಜುನ ಕ್ಷೇತ್ರ ದಾರಿಯಾಗಿ ಕರಂದಕ್ಕಾಡ್ ವರೆಗೆ ಆಕಾಶ ಮಾರ್ಗ ನಿರ್ಮಿಸಬೇಕೆಂದು ಆಗ್ರಹಿಸಿ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ, ಮುಖ್ಯಮಂತ್ರಿಗೆ ಕಾಸರಗೋಡು ಛೇಂಬರ್ ಆಫ್ ಕಾಮರ್ಸ್ ಮನವಿ ನೀಡಿದೆ. ಪ್ರಸ್ತುತ ಇರುವ ವಾಹನಗಳ ಹೊರತಾಗಿ ನೂರಾರು ವಾಹನಗಳು ದಿನಂಪ್ರತಿ ರಸ್ತೆಗಿಳಿಯುತ್ತಿದ್ದು, ಪಾರ್ಕಿಂಗ್‌ಗೆ ಕೂಡಾ ವ್ಯವಸ್ಥೆಯಿಲ್ಲದ ಕಾಸರಗೋಡು ಪೇಟೆಯಲ್ಲಿ ಕಷ್ಟ ಪಟ್ಟು ಎರಡು ವಾಹನಗಳಿಗೆ ಮಾತ್ರ ಸಂಚರಿಸಲಾಗುವ ರಸ್ತೆ ಇದೆ. ರೈಲ್ವೇ ನಿಲ್ದಾಣ ರಸ್ತೆಯಲ್ಲಿ ದಿನವೂ ಜನದಟ್ಟಣೆ ಹೆಚ್ಚುತ್ತಿರುವಾಗ ತುರ್ತಾಗಿ ಸಾಗುವವರಿಗೆ ರೈಲುಗಾಡಿ ಲಭಿಸದಾಗುವುದು ನಿತ್ಯ ಘಟನೆಯಾಗಿದೆ. ಈ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಆಕಾಶಮಾರ್ಗ ಪರಿಹಾರವಾ ಗಬಹುದೆಂದು ಛೇಂಬರ್ ಆಫ್ ಕಾಮರ್ಸ್ ಅಭಿಪ್ರಾಯಪಟ್ಟಿದೆ.