ಹೊಸ ವರ್ಷಾಚರಣೆ: ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

ಕಾಸರಗೋಡು: 2025ನೇ ಹೊಸ ವರ್ಷ ಆಚರಿಸಲು ಜಿಲ್ಲೆ ಸಜ್ಜಾಗಿದೆ. ಇದರ ಹೆಸರಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಿರಲು ಜಿಲ್ಲೆಯಾದ್ಯಂತ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಮುಂಗಡ ಅನುಮತಿ ಪಡೆಯದೆ ಸಾರ್ವಜನಿಕ ಪ್ರದೇಶಗಳಲ್ಲಿ  ಯಾವುದೇ ಕಾರ್ಯಕ್ರಮ  ನಡೆಸಬಾರದು. ಹಾಗೆ ನಡೆದಲ್ಲಿ ಅಂತಹವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷಾಚರಣೆ ಕಾರ್ಯಕ್ರ ಮವನ್ನು ರಾತ್ರಿ 12 ಗಂಟೆಯೊಳಗೆ ಮಾತ್ರವಾಗಿ ಸೀಮಿತಗೊಳಿಸಬೇಕು. ಅನಂತರ ಕಾರ್ಯಕ್ರಮ ನಡೆಸಿದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷಾಚರಣೆ ಕಾರ್ಯಕ್ರಮ ಸೀಮೆ ಮೀರಬಾರದೆಂಬ ಮುನ್ನೆಚ್ಚರಿ ಕೆಯನ್ನೂ ಪೊಲೀಸರು ನೀಡಿದ್ದಾರೆ. 

ಈಗಾಗಲೇ ಪೊಲೀಸರು ಜಿಲ್ಲೆಯಾ ದ್ಯಂತ ಬಿಗಿ ಗಸ್ತು ಏರ್ಪಡಿಸಿದ್ದಾರೆ. ಇಂದು ಸಂಜೆ ಬಳಿಕ ಗಸ್ತು ತಿರುಗು ವಿಕೆಯನ್ನು ಇನ್ನಷ್ಟು ಬಿಗಿಗೊಳಿಸಲಾ ಗುವುದು. ವಾಹನಗಳನ್ನು ತಪಾಸಣೆಗೊಳಪಡಿಸಲಾಗುವುದು. ಅಮಿತ ವೇಗ, ಮದ್ಯದಮಲಿನಲ್ಲಿ ವಾಹನ ಚಲಾಯಿಸುವಿಕೆ, ಮಿತಿಮೀರಿದ ರೀತಿಯಲ್ಲಿ ಯಾವುದೇ ಸಾರಿಗೆ ಕಾನೂನು ಉಲ್ಲಂಘನೆ  ನಡೆಸುವುದು ಗಮನಕ್ಕೆ ಬಂದಲ್ಲಿ ಹೈಕೋರ್ಟ್ ನಿರ್ದೇಶ ಪ್ರಕಾರ ಅಂತಹ ವಾಹನಗಳ ಆರ್.ಸಿ ಮತ್ತು ಡ್ರೈವಿಂಗ್ ಲೈಸನ್ಸ್ ಅಮಾನತುಗೊಳಿಸುವ ಇತ್ಯಾದಿ ಕ್ರಮ ಕೈಗೊಳ್ಳಲಾಗುವುದೆಂದು ಇನ್ನೊಂದೆಡೆ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳೂ ಮುನ್ನೆಚ್ಚರಿಕೆ ನೀಡಿದ್ದಾರೆ. ಅಬಕಾರಿ ಇಲಾಖೆಯೂ ಇನ್ನೊಂದೆಡೆ ಅಕ್ರಮ ಮದ್ಯ ಸಾಗಾಟಗಳ ವಿರುದ್ಧ ಕಾರ್ಯಾಚರಣೆಗೆ ಇಳಿದಿದೆ.

ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವಿಸುವವರು ಮತ್ತು ಮದ್ಯದ ಮಲಿನಲ್ಲಿ ವಾಹನ ಚಲಾಯಿಸುವ ವರನ್ನು ಪತ್ತೆಹಚ್ಚಲು  ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಹೊಸ ವರ್ಷಾಚರಣೆಯ ಅಂಗವಾಗಿ ಕಾಸರಗೋಡು ಪಿಲಿಕುಂ ಜೆಯ ಸಂಧ್ಯಾರಂಗಂ ತೆರೆದ ಸಭಾಂಗಣದಲ್ಲಿ ಇಂದು ಸಂಜೆ ೬ ಗಂಟೆಗೆ ಉಸ್ತಾದ್ ಖಾಲೀದ್ ಸಾಬ್ ತಂಡದಿಂದ ಖವಾಲಿ-ಘಸಲ್ ಸಂಧ್ಯಾ ಹಾಗೂ ತಂಡರ್ ಬೇರ್ಡ್ಸ್ ಮ್ಯೂಸಿಕಲ್  ಟೀಂನಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲು ತೀರ್ಮಾನಿಸಿದ್ದಾರೆ.

You cannot copy contents of this page