ಹೋಟೆಲ್ ನೌಕರ ನೇಣು ಬಿಗಿದು ಸಾವು
ಉಪ್ಪಳ: ಹೋಟೆಲ್ ನೌಕರನೋ ರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾನೆ. ಉತ್ತರಪ್ರದೇಶದ ಬಹರಿಯ ಜಿಲ್ಲೆಯ ಅತಿಯಾಪುರ್ ಕುಂಡಸಾರ್ ಎಂಬಲ್ಲಿನ ಇದ್ರೀಸ್ ಎಂಬ ವರ ಪುತ್ರ ನೂರಾಲಿ (21) ಸಾವಿಗೀಡಾದ ವ್ಯಕ್ತಿ. ಈತ ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದನು.
ಇತರ ಕೆಲವು ನೌಕರ ರೊಂದಿಗೆ ನೂರಾಲಿ ಹೋಟೆಲ್ ಸಮೀ ಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದನು. ನಿನ್ನೆ ಸಂಜೆ ೫ ಗಂಟೆ ಬಳಿಕ ಈತ ಒಬ್ಬನೇ ಕ್ವಾರ್ಟರ್ಸ್‌ನಲ್ಲಿದ್ದನು. ರಾತ್ರಿ 12 ಗಂಟೆಗೆ ಇತರ ನೌಕರರು ತಲುಪಿದಾಗ ಕ್ವಾರ್ಟರ್ಸ್‌ನ ಬಾಗಿಲು ಮುಚ್ಚಲಾಗಿತ್ತು. ಒಳಗಿಂದ ಚಿಲಕ ಹಾಕಿದ್ದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ನೋಡಿದಾಗ ನೂರಾಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ.