೨೦೦೦ ಮುಖಬೆಲೆಯ ಶೇ. ೯೩ರಷ್ಟು  ನೋಟುಗಳು ಬ್ಯಾಂಕ್‌ಗಳಿಗೆ ವಾಪಸು

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ೨೦೦೦ ಮುಖಬೆಲೆಯ ರೂಪಾಯಿ  ನೋಟಿನ ಬಗ್ಗೆ ಹೊಸ ನವೀಕರಣೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಅಂಕಿ ಅಂಶಗಳ ಪ್ರಕಾರ ೨೦೦೦ ರೂಪಾಯಿಯ ಒಟ್ಟು  ನೋಟುಗಳಲ್ಲಿ ಶೇ. ೯೩ರಷ್ಟು ಬ್ಯಾಂಕ್‌ಗಳಿಗೆ ವಾಪಸು ಬಂದಿದೆಯೆಂದು ತಿಳಿಸಲಾಗಿದೆ. ಇನ್ನು ಶೇ.೭ರಷ್ಟು ಬಾಕಿ ಉಳಿದುಕೊಂಡಿದೆ.

೨೦೨೩ ಮೇ ೧೯ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ೨೦೦೦ ರೂ. ಮುಖಬೆಲೆಯ ನೋಟುಗಳನ್ನು ಹಿಂತೆದುಕೊಳ್ಳುವ ಘೋಷಣೆ ಮಾಡಿತ್ತು. ೨೦೦೦ ರೂಪಾಯಿ ನೋಟುಗಳನ್ನು ಸೆಪ್ಟಂಬರ್ ೩೦ರೊಳಗಾಗಿ (೨೦೦೦ ರೂಪಾಯಿ ನೋಟನ್ನು ಠೇವಣಿ ಮಾಡಲು ಕೊನೆ ದಿನಾಂಕ) ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿತ್ತು. ಇದರಿಂದಾಗಿ ಸೆಪ್ಟಂಬರ್ ೩೦ರ ತನಕ ಮಾತ್ರವೇ ಈ ನೋಟುಗಳ ಚಲಾವಣೆ ನಡೆಸಬಹುದು. ನಂತರ ಅದು ಅಮಾನ್ಯಗೊಳ್ಳಲಿದೆ.

  ಮಾರ್ಚ್ ೨೦೨೩ರ ವೇಳೆಗೆ ಚಲಾವಣೆಯಲ್ಲಿದ್ದ ೨೦೦೦ ರೂ. ಮೌಲ್ಯವು ೩.೬೨ ಲಕ್ಷಕೋಟಿ ಯಷ್ಟಿತ್ತು.  ಅವುಗಳನ್ನು ಹಿಂತೆಗೆಯುವ ಘೋಷಣೆ ಹೊರಬಿದ್ದ ಬಳಿಕ ೨೦೨೩ ಅಗೋಸ್ತ್ ೩೧ರ ಹೊತ್ತಿಗೆ ಕೇವಲ ೦.೨೪ ಲಕ್ಷ ಕೋಟಿ ರೂ.ಗಳ ೨೦೦೦ ರೂ. ನೋಟುಗಳು ಚಲಾವಣೆಗೆ ಬಾಕಿ ಉಳಿದಿದ್ದವು. ಇದು ಒಟ್ಟು ೨೦೦೦ ರೂ.ಗಳ ನೋಟುಗಳ ಶೇ. ೭ ಆಗಿದೆಯೆಂದು ಆರ್‌ಬಿಐ ತಿಳಿಸಿದೆ.

RELATED NEWS

You cannot copy contents of this page