೨೦೦೦ ರೂ.ನ ಫೋಟೋಸ್ಟಾಟ್ ಬ್ಯಾಂಕ್‌ಗೆ ನೀಡಲು ಯತ್ನ: ಇಬ್ಬರ ವಿರುದ್ಧ ಕೇಸು
ಕಾಸರಗೋಡು: ಎರಡು ಸಾವಿರ ಮುಖಬೆಲೆಯ ಫೋ ಟೋಸ್ಟಾಟ್ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸಲು ನೀಡಿದ ಇಬ್ಬರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖ ಲಿಸಿದ್ದಾರೆ.
ಉದುಮ ನಿವಾಸಿಗಳಾದ ಅಶೋಕ್ ಕುಮಾರ್ ಮತ್ತು ಅನೂಪ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ರಸ್ತೆಯಲ್ಲಿ ಪರ್ಸೊಂದು ಈ ಇಬ್ಬರಿಗೆ ಲಭಿಸಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ ಅಸಲಿ ೨೦೦೦ ರೂ. ನೋಟುಗಳಂತೆ ತೋರುವ ಏಳು ಫೋಟೋ ಸ್ಟಾಟ್ ನೋಟುಗಳು ಒಳಗೊಂ ಡಿತ್ತು. ಅದನ್ನು ಅವರು ಫೆಡರಲ್ ಬ್ಯಾಂಕ್‌ನ ಉದುಮ ಶಾಖೆಗೆ ನೀಡಿ ಅದರ ಮೌಲ್ಯವಾಗಿ ೧೪,೦೦೦ ರೂ. ಪಡೆಯಲೆತ್ನಿಸಿ ದ್ದರು. ಆ ನೋಟುಗಳನ್ನು ಕಂಡು ಶಂಕೆಗೊಂಡ ಬ್ಯಾಂಕ್‌ನ ಸಿಬ್ಬಂದಿ ಅದನ್ನು ಬ್ಯಾಂಕ್ ಮೆನೇಜರ್‌ನ ಗಮನಕ್ಕೆ ತಂದರು. ಬಳಿಕ ಮೆನೇಜರ್ ಆ ಬಗ್ಗೆ ನೀಡಿದ ದೂರಿ ನಂತೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಆದರೆ ಅದು ಫೋಟೋ ಸ್ಟಾಟ್ ನೋಟು ಆಗಿದೆಯೆಂ ಬುವುದನ್ನು ತಿಳಿಯದೆ ಆರೋಪಿಗಳು ಅದನ್ನು ಬದಲಾ ಯಿಸಲು ಬ್ಯಾಂಕ್‌ಗೆ ತಂದಿದ್ದರೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.