೪೬ ಲಕ್ಷ ರೂ.ಗಳ ಚಿನ್ನ ದೇಹದಲ್ಲಿ ಬಚ್ಚಿಟ್ಟು ಸಾಗಾಟ: ಕಾಸರಗೋಡು ನಿವಾಸಿ ಸೆರೆ
ಕಾಸರಗೋಡು: ೪೬ ಲಕ್ಷ ರೂಪಾಯಿಗಳ ಚಿನ್ನವನ್ನು ದೇಹದೊಳಗೆ ಬಚ್ಚಿಟ್ಟು ಸಾಗಿಸಿದ ಕಾಸರಗೋಡು ನಿವಾಸಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಾಸರಗೋಡು ನಿವಾಸಿಯಾದ ಹಂಸ ಆಶಿಫ್ ಎಂಬಾತನಿಂದ ಚಿನ್ನ ವಶಪಡಿ ಸಲಾಗಿದೆ. ಈತ ಇಂದು ಮುಂಜಾನೆ ೪.೩೦ಕ್ಕೆ ಶಾರ್ಜಾದಿಂದ ಬಂದು ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ ವಿಮಾನದ ಪ್ರಯಾ ಣಿಕನಾಗಿದ್ದಾನೆ. ಈತನ ದೇಹವನ್ನು ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ೮೬೨ ಗ್ರಾಂ ಚಿನ್ನವನ್ನು ಮೂರು ಮಾತ್ರೆಗಳ ರೂಪದಲ್ಲಾಗಿಸಿ ಗುದದ್ವಾರದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆಯೆಂದು ತಿಳಿಯಲಾಗಿದೆ.