1.250 ಕಿಲೋ ಗಾಂಜಾ ಸಹಿತ ಓರ್ವ ಸೆರೆ

ಕಾಸರಗೋಡು: ೧.೨೫೦ ಕಿಲೋ ಗಾಂಜಾ ಕೈವಶವಿರಿಸಿ ಕೊಂಡ ಆರೋ ಪದಂತೆ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಹೊಸದುರ್ಗ ತಾಲೂಕು ಪುದುಕೈ ವಿಲ್ಲೇಜ್ ವಾಳನ್ನೋರಡಿ ನಿವಾಸಿ ಶಾಜಿ ಪಿ. (೪೯) ಎಂಬಾತ ಬಂಧಿತ ವ್ಯಕ್ತಿ. ಈತನ ವಿರುದ್ಧ ಎನ್‌ಡಿಪಿ ಎಸ್ ಕೇಸು ದಾಖಲಿಸ ಲಾಗಿದೆ. ನಿನ್ನೆ ರಾತ್ರಿ ೧೦.೩೫ರ ವೇಳೆ ಹೊಸದುರ್ಗ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ದಿಲೀಪ್ ಎಂ.ಯು. ನೇತೃತ್ವದ ತಂಡ ನೋರ್ತ್ ಕೋಟಚ್ಚೇರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಹಚ್ಚಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶಾಜಿ ಕೆ.ವಿ, ಸಿಜು ಕೆ, ಸಿಜಿನ್ ಸಿ, ಚಾಲಕ ದಿಜಿತ್ ಪಿ.ವಿ. ಎಂಬಿವರಿದ್ದರು

You cannot copy contents of this page