ಮುಳಿಯಾರು: ಪಂಚಾಯತ್ ವ್ಯಾಪ್ತಿಯ ಕಾನತ್ತೂರು ವಡಕ್ಕೇಕರೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕೇಂದ್ರದಲ್ಲಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗಿ ದ್ದು, ಇದರ ಉದ್ಘಾಟನೆಯನ್ನು ಈ ತಿಂಗಳ 28ರಂದು ಪರಿಶಿಷ್ಟ ಜಾತಿ ಹಿಂದುಳಿದ ವಿಭಾಗ ಕ್ಷೇಮ ಇಲಾಖೆ ಸಚಿವ ಒ.ಆರ್. ಕೇಳು ನಿರ್ವಹಿಸು ವರು. ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಂಗವಾಗಿ ಈ ಯೋಜನೆ ಜ್ಯಾರಿಗೊಳಿಸಲಾಗಿದೆ. ೩೫ರಷ್ಟು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ, ಉಪಯೋಗಶೂನ್ಯವಾದ ಬಾವಿಗಳು, ಪೂರ್ತಿಗೊಳ್ಳದ ಮನೆಗಳು ಮೊದಲಾದ ಸಮಸ್ಯೆಗಳು ಈ ಕೇಂದ್ರದಲ್ಲಿ ಕಂಡು ಬರುತ್ತಿತ್ತು. 2021-22ರ ಆರ್ಥಿಕ ವರ್ಷದಲ್ಲಿ ಈ ಕೇಂದ್ರವನ್ನು ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಲಾಗಿದೆ. 99,20,248 ರೂ.ಗಳ ಆಡಳಿತಾನುಮತಿಯೊಂದಿಗೆ ಆರಂಭಿಸಿದ ಚಟುವಟಿಕೆಗಳಿಗೆ 2023 ಎಪ್ರಿಲ್‌ರಲ್ಲಿ ನಾಂದಿಯಾಡಲಾಗಿತ್ತು. ಕಳೆದ ಮಂಗಳವಾರ ಎಲ್ಲಾ ಕಾಮಗಾರಿಗಳು ಪೂರ್ತಿಗೊಂಡಿವೆ. ಅಭಿವೃದ್ಧಿ ಚಟುವಟಿಕೆಗಳ ಅಂಗವಾಗಿ 14 ಮನೆಗಳ ಪುನರುದ್ಧಾರ, ಇಂಟರ್ನಲ್ ಕಾಂಕ್ರೀಟ್ ರಸ್ತೆ ನಿರ್ಮಾಣ, ಬಾವಿ ಪುನರುದ್ಧಾರ ಚಟುವಟಿಕೆಗಳು, ಅಧ್ಯಯನ ಕೊಠಡಿ, ಇಲೆಕ್ಟ್ರಿಫಿಕೇಶನ್, ಪಿಠೋಪಕರಣಗಳು, ಸೋಲಾರ್ ಸ್ಟ್ರೀಟ್ ಲೈಟ್ ಸ್ಥಾಪಿಸುವುದು ಮೊದಲಾದವುಗಳನ್ನು ಜ್ಯಾರಿಗೊಳಿಸಲಾಗಿದೆ. ಮೊದಲು 15 ಮನೆಗಳನ್ನು ಒಳಗೊಳ್ಳಿಸಲಾಯಿತಾ ದರೂ ಎರಡು ಲೈಫ್ ಮಿಶನ್‌ನಲ್ಲಿ ಸೇರಿಕೊಂಡ ಕಾರಣ ಅದನ್ನು ಬದಲಿಸಲಾಯಿತು. ಪ್ಲಾಸ್ಟರಿಂಗ್, ಕಿಟಿಕಿ, ಬಾಗಿಲು ನಿರ್ಮಾಣ, ಪೈಟಿಂಗ್, ಟೈಲ್ಸ್ ಹಾಕುವುದು, ಕಾಂಕ್ರೀಟ್ ಹಾಕುವುದು ಮೊದಲಾದವು ಈ ಯೋಜನೆಯ ಪ್ರಧಾನ ಹಂತಗಳಾಗಿತ್ತು.






