10ರ ಹರೆಯದ ಬಾಲಕ, 16ರ ಬಾಲಕಿಗೆ ಕಿರುಕುಳ: ಮಂಜೇಶ್ವರದಲ್ಲಿ ಇಬ್ಬರು ಪೋಕ್ಸೋ ಪ್ರಕಾರ ಬಂಧನ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಡೆಗಳಲ್ಲಿ ಪ್ರಾಯಪೂರ್ತಿಯಾಗದ ಇಬ್ಬರು ಮಕ್ಕಳ ಮೇಲೆ ಕಿರುಕುಳ ನಡೆದ ಬಗ್ಗೆ ದೂರಲಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹತ್ತರ ಹರೆಯದ ಬಾಲಕನನ್ನು ಅಂಗಡಿಗೆ ಕರೆದೊಯ್ದು ಕಿರುಕುಳ ನೀಡಿದ ಬಗ್ಗೆ ನೀಡಿದ ದೂರಿನಂತೆ ಉಪ್ಪಳ ಆರ್‌ಎಸ್ ರೋಡ್‌ನ ರುಕ್ಸಾನ ಮಂಜಿಲ್‌ನ ಶೇಕ್ ಮೊಯ್ದೀನ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.

ಇನ್ನೊಂದು ಪ್ರಕರಣದಲ್ಲಿ 16ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ತಾಯಿಯ  ತಂದೆಯನ್ನು ಪೋ ಕ್ಸೋ ಪ್ರಕಾರ ಬಂಧಿಸಲಾಗಿದೆ. ಬಾಲಕಿ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಮನೆ ಯಲ್ಲಿ ಯಾರೂ ಇಲ್ಲದ ಸಂದರ್ಭ ದಲ್ಲಿ ಕಿರುಕುಳ ನೀಡಿರುವುದಾಗಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page