10 ದಿನಗಳ ಹಿಂದೆ ಮೃತಪಟ್ಟ ಯುವಕನ ಸಾವಿನಲ್ಲಿ ಸಂಶಯವ್ಯಕ್ತಪಡಿಸಿ ಸಹೋದರನಿಂದ ದೂರು
ಉಪ್ಪಳ: ಹತ್ತು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಮಜೀರ್ಪಳ್ಳ ಬದಿಯಾರು ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಶ್ರಫ್ (44) ಎಂಬವರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಅವರ ಸಹೋದರ ಕನ್ಯಾನ ಮರಾಟಿಮೂಲೆಯಲ್ಲಿ ವಾಸಿಸುವ ಇಬ್ರಾಹಿಂ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಅಶ್ರಫ್ ಮಜೀರ್ಪಳ್ಳದಲ್ಲಿ ಗೂಡಂಗಡಿ ನಡೆಸುತ್ತಿದ್ದರು. ಈ ತಿಂಗಳ ೫ರಂದು ರಾತ್ರಿ ಮನೆಯಲ್ಲಿ ನಿದ್ರಿಸಿದ್ದ ಅವರು ೬ರಂದು ಬೆಳಿಗ್ಗೆ ಎದ್ದಿರಲಿಲ್ಲವೆನ್ನಲಾಗಿದೆ. ಇದರಿಂದ ಮನೆಯವರು ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆಂದು ತಿಳಇದುಬಂದಿದೆ. ಬಳಿಕ ಮೃತದೇಹವನ್ನು ಕನ್ಯಾನದ ಮಸೀದಿಯೊಂದರ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆದರೆ ಇದೀಗ ಅಶ್ರಫ್‌ರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಶ್ರಫ್ ನಿಧನ ಹೊಂದಿದ ವೇಳೆ ಇಬ್ರಾಹಿಂ ಪೂನದಲ್ಲಿದ್ದರೆಂದೂ ಈ ಹಿನ್ನೆಲೆಯಲ್ಲಿ ಅವರಿಗೆ ಅಂತ್ಯಸಂಸ್ಕಾರ ವೇಳೆ ಅಲ್ಲಿಗೆ ತಲುಪಲು ಸಾಧ್ಯವಾಗಿರಲಿಲ್ಲವೆಂದೂ ಹೇಳಲಾಗುತ್ತಿದೆ.