ತರವಾಡು ಮನೆಯಿಂದ 10 ಪವನ್ ಚಿನ್ನ ನಾಪತ್ತೆ: ಹೋಂನರ್ಸ್ ಮೇಲೆ ಶಂಕೆ

ಕಾಸರಗೋಡು: ನಗರದ ಅಣಂಗೂರು ಪಚ್ಚೆಕ್ಕಾಡ್ ನೂರ್ ಮಂಜಿಲ್ ಟಿ.ಎ. ಶಾಹಿನ ಎಂಬವರ ಮನೆಯಿಂದ 10 ಪವನ್ ಚಿನ್ನ ನಾಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಗೋಸ್ತ್ 14 ಮತ್ತು ಸೆಪ್ಟಂಬರ್ 6ರ ನಡುವಿನ ಯಾವುದೋ ಸಮಯದಲ್ಲಿ ಕಳವು ನಡೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಶಾಹಿನಾ ತಿಳಿಸಿದ್ದಾರೆ. ಶಾಹಿನಾಳ ತಾಯಿಯ ತರವಾಡು ಮನೆಯಿಂದ ಈ ಚಿನ್ನ ಕಳವುಹೋಗಿದೆ. ಈ ಮನೆಯ ಹೋಂ ನರ್ಸ್ ಮೇಲೆ ದೂರಿನಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ. ಹೋಂನರ್ಸ್ ಲಲಿತಾ ಎಂಬಾಕೆ ಓಣಂ ಹಬ್ಬಕ್ಕೆ ಊರಿಗೆ ಹೋಗುವುದಾಗಿ ತಿಳಿಸಿ ಬಳಿಕ ಹಿಂತಿರುಗಿಲ್ಲವೆಂದು  ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page