1000 ರೂ. ಲಂಚ ಪಡೆದ ವಿಲ್ಲೇಜ್ ಆಫೀಸರ್ಗೆ: 2 ವರ್ಷ ಕಠಿಣ ಸಜೆ, 40,000 ರೂ. ದಂಡ


ಕಾಸರಗೋಡು: ಸ್ಥಳದ ಸ್ಕೆಚ್ ನೀಡಲು 1000 ರೂಪಾಯಿ ಲಂಚ ಪಡೆದ ವಿಲ್ಲೇಜ್ ಆಫೀಸರ್ಗೆ ನ್ಯಾಯಾಲಯ ಎರಡು ವರ್ಷಗಳ ಕಠಿಣ ಸಜೆ ಹಾಗೂ 40,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಆದೂರು ಗ್ರೂಪ್ ವಿಲ್ಲೇಜ್ ಆಫೀಸರ್ ಆಗಿದ್ದ ಕೆ. ಅನಿಲ್ ಕುಮಾರ್ (47)ಗೆ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಧೀಶ ಕೆ. ರಾಮಕೃಷ್ಣನ್ ಈ ಶಿಕ್ಷೆ ವಿಧಿಸಿದ್ದಾರೆ. ಅನಿಲ್ ಕುಮಾರ್ ಚೆಮ್ನಾಡ್ನ ಪರವನಡ್ಕ ನಿವಾಸಿಯಾ ಗಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿ ಸಬೇಕೆಂದೂ ನ್ಯಾಯಾಲಯದ ತೀರ್ಪಿನಲ್ಲಿ ತಿಳಿ ಲಾಗಿದೆ. ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಉಮರ್ ಫಾರೂಕ್ ಎಂಬವರ ಸ್ಥಳದ ಸ್ಕೆಚ್ಗಾಗಿ ಅರ್ಜಿ ಸಲ್ಲಿಸಿದಾಗ ವಿಲ್ಲೇಜ್ ಆಫೀಸರ್ 1500 ರೂಪಾಯಿ ಲಂಚ ಕೇಳಿರುವುದಾಗಿ ಯೂ, ಬಳಿಕ 1000 ರೂಪಾಯಿ ಪಡೆದುಕೊಂಡಿ ರುವುದಾಗಿ ಪ್ರಕರಣ ದಾಖಲಿಸ ಲಾಗಿತ್ತು. ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿಯಾಗಿದ್ದ ಕೆ. ದಾಮೋ ದರನ್ ಕೇಸು ದಾಖಲಿಸಿದ್ದರು. 2013 ಅಕ್ಟೋಬರ್ 21ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಇನ್ಸ್ಪೆಕ್ಟರ್ಗಳಾದ ಡಾ. ವಿ. ಬಾಲಕೃಷ್ಣನ್, ಟಿ.ಪಿ. ಸುಮೇಶ್, ಸಿ.ಎಂ. ದೇವದಾಸ್, ಡಿವೈಎಸ್ಪಿ ರಘುರಾಮನ್ ಎಂಬಿವರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

You cannot copy contents of this page