ಕುಂಬಳೆ: ಮೊಗ್ರಾಲ್ ಕೊಪ್ಪಳದ ರೆಸಾರ್ಟ್ವೊಂದಕ್ಕೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 103 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ರೆಸಾರ್ಟ್ನ ಮೆನೇಜರ್ ತ್ರಿಪುರರಾಜ್ಯದ ಪಾನಿಸಾಗರ್ ನಿವಾಸಿ ಕೈಸುದ್ದೀನ್ (23) ಎಂಬಾತನನ್ನು ಬಂಧಿಸಲಾಗಿದೆ. ಕುಂಬಳೆ ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದಲ್ಲಿ ನಡೆದ .ಕಾರ್ಯಾಚರಣೆಯಲ್ಲಿ ಅಸಿ. ಎಕ್ಸೈಸ್ ಇನ್ಸ್ಪೆಕ್ಟರ್ ಅನೀಶ್ ಕುಮಾರ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಹರಿಶ್ರೀ, ಸಿಇಒಗಳಾದ ರಾಹುಲ್, ಅವಿ ನಾಶ್, ಚಾಲಕ ಪ್ರವೀಣ್ ಕುಮಾರ್.ಪಿ ಮೊದಲಾದವರು ಭಾಗವಹಿಸಿದರು.
