107 ಕಿಲೋ ಗಾಂಜಾ ವಶ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಹೋದ ಅಬಕಾರಿ ಅಧಿಕಾರಿಗಳಿಗೆ ಇರಿದು ಕೊಲೆಗೈಯ್ಯಲೆತ್ನ; ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ಅಬಕಾರಿ ಅಧಿಕಾರಿಗ ಳಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಅತೀ ಸಾಹಸದಿಂದ ಸೆರೆಹಿಡಿಯಲಾಗಿದೆ. ಬಂಬ್ರಾಣ ನಿವಾಸಿ ಅಬ್ದುಲ್ ಬಾಸಿತ್ (40) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತನನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ   ರಿಮಾಂಡ್ ವಿಧಿಸಲಾಗಿದೆ.

ಕಳೆದ ವರ್ಷ ಅಬಕಾರಿ ಅಧಿಕಾ ರಿಗಳು ನಡೆಸಿದ ಕಾರ್ಯಾಚರಣೆ ಯೊಂದರಲ್ಲಿ 107 ಕಿಲೋ ಗಾಂಜಾ ವಶಪಡಿ ಲಾಗಿತ್ತು. ಈ ಪ್ರಕರಣದಲ್ಲಿ ಅಬ್ದುಲ್ ಬಾಸಿತ್‌ನನ್ನು ನಾಲ್ಕನೇ ಆರೋಪಿಯಾಗಿ ಕೇಸು ದಾಖಲಿಸ ಲಾಗಿತ್ತು. ಆದರೆ ಅನಂತರ ಆರೋಪಿ ತಲೆಮರೆಸಿಕೊಂಡಿದ್ದನು. ಈತ ನಿನ್ನೆ ಬಂಬ್ರಾಣಕ್ಕೆ ತಲುಪಿ ರುವುದಾಗಿ ಅಬಕಾರಿ ತಂಡಕ್ಕೆ ಮಾಹಿತಿ ಲಭಿಸಿತ್ತು. ಇದರಂತೆ ಆತನನ್ನು  ಸೆರೆಹಿಡಿಯಲು ನಿನ್ನೆ ಮಧ್ಯಾಹ್ನ ವೇಳೆ ಅಬಕಾರಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಆರೋಪಿ ಅಬಕಾರಿ ತಂಡದ ಮೇಲೆ ಆಕ್ರಮಣ ನಡೆಸಿದ್ದಾನೆನ್ನಲಾಗಿದೆ. ಎಕ್ಸೈಸ್ ನಾರ್ಕೋಟಿಕ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಪ್ರಜಿತ್ ಕೆ.ಆರ್ ಹಾಗೂ ಸಿವಿಲ್ ಎಕ್ಸೈಸ್ ಆಫೀಸರ್ ರಾಜೇಶ್ ಪಿ ಎಂಬಿವರಿಗೆ ಆರೋಪಿ ಇರಿದು ಗಾಯಗೊಳಿಸಿ ದ್ದಾನೆ. ಗಾಯಗೊಂಡ ಈ ಇಬ್ಬರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳಿಕ ಕುಂಬಳೆ ಪೊಲೀಸರ ಸಹಾಯದೊಂದಿಗೆ ಅಬ್ದುಲ್ ಬಾಸಿತ್‌ನನ್ನು ಸೆರೆಹಿಡಿಯಲಾಗಿದೆ.

ಈ ಘಟನೆಗೆ ಸಂಬಂಧಿಸಿ ಅಬಕಾರಿ ಅಧಿಕಾರಿ ಪ್ರಜಿತ್ ಕೆ.ಆರ್ ನೀಡಿದ ದೂರಿನಂತೆ ಅಬ್ದುಲ್ ಬಾಸಿತ್ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಬಂಧಿತ ಅಬ್ದುಲ್ ಬಾಸಿತ್ ಮೂರು ಇರಿತ ಪ್ರಕರಣಗಳಲ್ಲಿ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page