ಆಟೋರಿಕ್ಷಾದಲ್ಲಿ ಸಾಗಿಸತ್ತಿದ್ದ 108 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಕೂಡ್ಲು ಗಂಗೆ ರಸ್ತೆ ಬಳಿ ಕಾಸರಗೋಡು ಎಕ್ಸೈಸ್ ರೇಂಜ್ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್‌ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 108 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಆ ವಾಹನದಲ್ಲಿದ್ದ ಮಂಜೇಶ್ವರ ಕುಂಜತ್ತೂರು ನಿಶಾಂತ್ ನಿವಾಸದ ಬಿ. ಪ್ರಕಾಶ್ (36) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಆಟೋರಿಕ್ಷಾವನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ. ಈ ಅಬಕಾರಿ  ದಾಳಿ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಎ.ವಿ. ಪ್ರಶಾಂತ್ ಕುಮಾರ್, ಎಂ. ಅನುರಾಗ್, ವಿ. ನಿಖಿಲ್, ಎನ್.ಎ. ಅಶ್ವಿನ್ ಮತ್ತು ಚಾಲಕ ಮೈಕಲ್ ಜೋಸೆಫ್ ಎಂಬವರು ಒಳಗೊಂಡಿದ್ದರು.

You cannot copy contents of this page