11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಥಮ; 9 ಕಡೆಗಳಲ್ಲಿ ದ್ವಿತೀಯ
ತಿರುವನಂತಪುರ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆದಾಗ ರಾಜ್ಯದಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಥಮ ಸ್ಥಾನದಲ್ಲಿದೆ. 9 ಮಂಡಲಗಳಲ್ಲಿ ದ್ವಿತೀಯ ಸ್ಥಾನಕ್ಕೆ ತಲುಪಲು ಬಿಜೆಪಿಗೆ ಸಾಧ್ಯವಾಗಿದೆ. ತೃಶೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದ ರೊಂದಿಗೆ ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ಹೆಚ್ಚು ಸಾಧನೆಗೈಯ್ಯಲು ಸಾಧ್ಯವಿದೆಯೆಂಬುವುದನ್ನು ಇದು ಸೂಚಿಸುತ್ತದೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಪ್ರಧಾನ ಶಕ್ತಿಯಾಗಿ ಬಿಜೆಪಿ ಬೆಳೆಯಲಿದೆಯೆಂಬುವುದನ್ನು ಕೂಡಾ ಲೋಕಸಭಾ ಚುನಾವಣೆಯ ಫಲಿತಾಂಶ ಸಾಬೀತುಪಡಿಸುತ್ತಿದೆ. ಎಡ-ಐಕ್ಯರಂಗಗಳನ್ನು ಕೇಂದ್ರೀಕ ರಿಸಿದ ಕೇರಳ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿ ಬಿಜೆಪಿ ಬೆಳೆದಿದೆ ಎಂಬುವುದನ್ನು ಲೆಕ್ಕಾಚಾರಗಳು ಸೂಚಿಸುತ್ತಿವೆ. 2024ರ ಚುನಾವಣೆ ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂಬುವುದು ಕೂಡಾ ಚುನಾವಣಾ ಫಲಿತಾಂಶ ದಿಂದ ತಿಳಿದುಬರುತ್ತಿದೆ. ತಾವರೆಚಿನ್ಹೆ ಯಿಂದ ಸ್ಪರ್ಧಿಸಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಓರ್ವಸದಸ್ಯ ನನ್ನು ಕಳುಹಿಸಲು ಸಾಧ್ಯವಾಗಿರುವುದು ಮಾತ್ರವಲ್ಲ ಹೆಚ್ಚಿನ ಕ್ಷೇತ್ರಗಳಲ್ಲಿ ೨೦ಶೇ.ದಷ್ಟು ಮತ ಗಳಿಸಲು ಬಿಜೆಪಿಗೆ ಸಾಧ್ಯವಾಗಿದೆ.