ಮಂಜೇಶ್ವರ: ಕೊಡ್ಲಮೊಗರು ಬಳಿಯ ಸುಳ್ಯಮೆಯ ಮನೆಯ ಶೆಡ್‌ನಲ್ಲಿ ಬಚ್ಚಿಟ್ಟಿದ್ದ 116 ಕಿಲೋ ಗಾಂಜಾ ಪತ್ತೆಹಚ್ಚಿದ ಪ್ರಕರಣದ ಆರೋಪಿಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ರತೀಶ್ ಗೋಪಿಯವರ ನೇತೃತ್ವದ ತಂಡ ಮಡಿಕೇರಿಯಿಂದ ಬಂಧಿಸಿದೆ.
ಮಂಗಳೂರು ತೊಕ್ಕೋಟು ನಿವಾಸಿ ಸೆನೋಹರ್ (28) ಬಂಧಿತ ಆರೋಪಿ. ಗಾಂಜಾ ಪತ್ತೆಯಾದ ದಿನದಿಂದ ಈತ ತಲೆಮರೆಸಿಕೊಂಡಿದ್ದನು. ಈತನ ಗೂಗಲ್ ಪೇ ಅಕೌಂಟ್ ಟ್ರಾಕ್ ಮಾಡಿ ಅದರ ಜಾಡು ಹಿಡಿದು ನಡೆಸಿದ ಪರಿಶೀಲನೆಯಲ್ಲಿ ಆರೋಪಿ ಮೈಸೂರು ಮತ್ತಿತರೆಡೆಗಳಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಮಡಿಕೇರಿಯಿಂದ ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಬಂಧಿತ ಆರೋಪಿ ಕರ್ನಾಟಕ, ಒಡಿಸ್ಸಾ ಮತ್ತು ಆಂಧ್ರಪ್ರದೇಶಗಳಿಂದ ಗಾಂಜಾ ಸಾಗಿಸುವ ತಂಡದ ಕೊಂಡಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಂi ನ್ನು ಬಂಧಿಸಿದ ಪೊಲೀಸರ ತಂಡದಲ್ಲಿ ಎಎಸ್‌ಐ ಶಾಜು ಮತ್ತು ಸಿವಿಲ್ ಪೊಲೀಸ್ ಆಫೀಸರ್ ಸಜೀಶ್ ಎಂಬ ವರು ಒಳಗೊಡಿದ್ದರು. ಇದೇ ಪ್ರಕರಣದ ಇನ್ನೋರ್ವ ಆರೋಪಿ ಸಿದ್ದಗೌಡ ಎಂಬಾತನನ್ನು ದಿನಗಳ ಹಿಂದೆ ಪೊಲೀ ಸರು ಮೈಸೂರಿನಿಂದ ಬಂಧಿಸಿದ್ದರು.





