14.69 ಕೋಟಿ ರೂ.ಗಳ ಕೊಕೈನ್ ವಶ: ಇಬ್ಬರು ಯುವತಿಯರ ಬಂಧನ
ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 14.69 ಕೋಟಿ ರೂಪಾಯಿ ಮೌಲ್ಯದ 7 ಕಿಲೋ ಕೊಕೈನ್ ವಶಪಡಿಸ ಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ.
ಮಣಿಪುರ್ ನಿವಾಲಿ ಲಾಲ್‌ಜಾಮ್ ಲೂವಾಯಿ ಮಿಜೋರಾಮ್‌ನ ಲಾಲ್‌ತಾಂಗ್ ಲಿಯಾನಿ ಎಂಬಿವರು ಬಂಧಿತ ಯುವತಿ ಯರಾಗಿದ್ದು, ಇವರು ಅಂತಾರಾಜ್ಯ ಮಾದಕವಸ್ತು ಸಾಗಾಟದ ಕೊಂಡಿಗ ಳಾಗಿದ್ದಾರೆಂದು ಹೇಳಲಾಗುತ್ತಿದೆ. ಸಾಬೂನು ಪೆಟ್ಟಿಗೆಗಳಲ್ಲಿ ಬಚ್ಚಿಟ್ಟು ಕೊಕೈನ್ ತರಲಾಗಿತ್ತು. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ನಡೆಸಿದ ತಪಾಸಣೆ ವೇಳೆ ಮಾದಕ ವಸ್ತು ಪತ್ತೆಯಾಗಿದೆ.