ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 14.04 ಲೀಟರ್ ಗೋವಾ ಮದ್ಯವನ್ನು ಅಬಕಾರಿ ದಳ ವಶಪಡಿಸಿ ಓರ್ವನನ್ನು ಬಂಧಿಸಿದೆ. ಚೆಂಗಳ ಪನ್ನಿಪ್ಪಾರೆ ನಿವಾಸಿ ಶಾಜಹಾನ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಚೆರ್ಕಳದಲ್ಲಿ ನಿನ್ನೆ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಶಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ ಪತ್ತೆಯಾಗಿದೆ. ಶಾಜಹಾನ್ ಸಂಚರಿಸುತ್ತಿದ್ದ ಸ್ಕೂಟರ್‌ನಿಂದ 180 ಮಿಲ್ಲಿ ಲೀಟರ್‌ನ 78 ಬಾಟ್ಲಿ ಮದ್ಯ ವಶಪಡಿಸಲಾಗಿದೆ. ಈತ ಹಲವು ಅಬಕಾರಿ ಪ್ರಕರಣದಲ್ಲಿ ಆರೋಪಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್)ಗಳಾದ ನೌಶಾದ್ ಕೆ., ಕೆ.ಆರ್. ಪ್ರಜಿತ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಜೇಶ್ ಪಿ., ಅತುಲ್ ಟಿ.ವಿ. ಎಂಬಿವರಿದ್ದರು.
