144 ಪ್ಯಾಕೆಟ್ ಕರ್ನಾಟಕ ಮದ್ಯ ಸಹಿತ ಓರ್ವ ಬಂಧನ: ಸ್ಕೂಟರ್ ವಶ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಚೆರ್ಕಳದಲ್ಲಿ ನಡೆಸಿದ ಶೋಧ ದಲ್ಲಿ 180 ಎಂಎಲ್‌ನ 144 ಟೆಟ್ರಾ ಪ್ಯಾಕೆಟ್ (25.92 ಲೀಟರ್) ಕರ್ನಾಟಕ ಮದ್ಯ ವಶಪಡಿಸಿ ಕೊಂಡಿದೆ.
ಇದಕ್ಕೆ ಸಂಬಂಧಿಸಿ ಚೆರ್ಕಳದ ಮೋಹನನ್ ಕೆ (44) ಎಂಬಾತನನ್ನು ಬಂಧಿಸಲಾಗಿದೆ. ಆತ ಚಲಾಯಿಸು ತ್ತಿದ್ದ ಸ್ಕೂಟರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ ಸ್ಪೆಕ್ಟರ್ ಸಿ.ಕೆ.ವಿ. ಸುರೇಶ್ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ (ಗ್ರೇಡ್) ನೌಶಾದ್ ಕೆ, ಸಿಇಒಗ ಳಾದ ಮಂಜು ನಾಥ, ಅತುಲ್, ರಾಜೇಶ್ ಮತ್ತು ಧನ್ಯ ಎಂಬಿವರ ನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.