ಚೆನ್ನೈ: ಯುವಕನನ್ನು ಅಪಹರಿಸಿಕೊಂಡು ಹೋಗಿ 15 ಲಕ್ಷ ರೂ. ದರೋಡೆ ನಡೆಸಿದ ಘಟನೆಯಲ್ಲಿ ತಮಿಳುನಾಡು ಸ್ಪೆಷಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಆದಾಯ ತೆರಿಗೆ ಇಲಾಖೆಯ ಮೂರು ಅಧಿಕಾರಿಗಳು ಸೆರೆಯಾಗಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ರಾಜಾಸಿಂಗ್, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ದಾಮೋದರನ್, ಪ್ರಭು, ಪ್ರದೀಪ್ ಎಂಬಿವರು ಸೆರೆಯಾದವರು. ಸಿಟಿ ಸ್ಕ್ಯಾನಿಂಗ್ ಸೆಂಟರ್‌ನ ನೌಕರನಾದ ಯುವಕನನ್ನು ಅಪಹರಿಸಿ ಹಣ ದರೋಡೆ ನಡೆಸಿದ್ದರು.