ಸಂಚಾರ ರದ್ದುಪಡಿಸಲು 15 ಖಾಸಗಿ ಬಸ್‌ಗಳು ಸಿದ್ಧ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದಾಗಿ ಭಾರೀ ಆದಾಯ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಬಸ್‌ಗಳ ಸಂಚಾರ ರದ್ದುಪಡಿಸಲು ಜಿಲ್ಲೆಯ 15 ಖಾಸಗಿ ಬಸ್‌ಗಳು ಮೋಟಾರು ವಾಹನ ಇಲಾಖೆಗೆ ಜಿ.ಫಾಂ ಸಲ್ಲಿಸಿದೆ. ಕೋವಿಡ್ ಮಹಾಮಾರಿಯ ಮೊದಲು ಜಿಲ್ಲೆಯಲ್ಲಿ 5೦೦ರಷ್ಟು ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಕೋವಿಡ್ ಬಳಿಕ ಆ ಸಂಖ್ಯೆ ೩೫೦ಕ್ಕಿಳಿದಿದೆ. ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ  ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ಬಳಿಕ ಜಿಲ್ಲೆಯಲ್ಲಿ ೫೦ರಷ್ಟು ಖಾಸಗಿ ಬಸ್‌ಗಳು ತಮ್ಮ ಬಸ್ ಸರ್ವೀಸ್‌ಗಳ ಸಂಖ್ಯೆ ಇಳಿಸಬೇಕಾಗಿಯೂ ಬಂದಿದೆ ಎಂದು ಖಾಸಗಿ ಬಸ್ ಮಾಲಕರು ಹೇಳುತ್ತಿದ್ದಾರೆ.

ಕಾಸರಗೋಡು- ತಲಪಾಡಿ, ಕಾಸರಗೋಡು- ಕಣ್ಣೂರು, ಕಾಸರಗೋಡು- ಕಾಞಂಗಾಡ್, ಕಾಸರಗೋಡು-ಪಯ್ಯನ್ನೂರು ಸೇರಿದಂತೆ ಇತರ ಹಲವು ರೂಟ್‌ಗಳಲ್ಲಿ ಹೆಚ್ಚಿನ ಖಾಸಗಿ ಬಸ್‌ಗಳು ನಷ್ಟದಿಂದಾಗಿ  ತಮ್ಮ ಸಂಚಾರ ಸಂಖ್ಯೆಯನ್ನು ನಷ್ಟದ ಹಿನ್ನೆಲೆಯಲ್ಲಿ ಇಳಿಸತೊಡಗಿದೆ ಎಂದು ಕೆಲವು ಬಸ್ ಮಾಲಕರು ಹೇಳುತ್ತಿದ್ದಾರೆ.

RELATED NEWS

You cannot copy contents of this page